22 Jan 2018
Bidadi.
೨೨ ಜನವರಿ ೨೦೧೮
ಬಿಡದಿ
ಸ್ವಾಮಿ ನಿತ್ಯಾನಂದರಿಗೆ ಮತ್ತೊಂದು ವಿಜಯ; ಮುಖ್ಯ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು,ರಾಮನಗರ; ಅವರು ಇಂದು ಸ್ವಾಮಿ ನಿತ್ಯಾನಂದರ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದ ಲೆನಿನ್ ಕರುಪ್ಪನ್ ಗೆ ಸಮನ್ಸ್ ಜಾರಿ, ಗಂಭೀರ ದೌರ್ಜನ್ಯ ಅತ್ಯಾಚಾರದ ಆಪಾದನೆ;ಮೊಕದ್ದಮೆ, ೨ ತಿಂಗಳ ಕಾಲಾವಧಿಯಲ್ಲಿ ವಿಚಾರಣೆ. ಗೌರವಾನ್ವಿತ ನ್ಯಾಯಾಲಯವು ತನಿಖೆ ಹಾಗು ಆರೋಪಪಟ್ಟಿ ಸಲ್ಲಿಕೆಗೆ ಆದೇಶಿಸಿ ಸಮನ್ಸ್ ಜಾರಿ ಮಾಡಿದೆ.
೨೦೧೩ ಮಾರ್ಚಿ, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ಪುಷ್ಪ ರವರು ಹೂಡಿದ್ದ ಮೊಕದ್ದಮೆಯಲ್ಲಿ ಆರೋಪಿತ ಲೆನಿನ್ ಕರುಪ್ಪನ್ ವಿರುದ್ಧ ಅತ್ಯಾಚಾರ ಯತ್ನ, ಸುಲಿಗೆ ಮತ್ತು ಪ್ರಾಣ ಬೆದರಿಕೆಯ ಕುರಿತು ಎಫ಼ ಐ ಆರ್ ದಾಖಲಿಸುವಂತೆ ಆದೇಶಿಸಿತ್ತು. ಇದರ ನಂತರ ಪೋಲಿಸರು ಬಿಡದಿ ಪೋಲಿಸ್ ಠಾಣೆಯಲ್ಲಿ ದೂರು ಮತ್ತು ಮಾರ್ಚಿ ೧೧ ರಂದು ಎಫ಼್ ಐ ಆರ್ ಸಿಆರ್. ನಂ. ೦೦೭೭/೨೦೧೩ ದಾಖಲಿಸಿದರು. ಮಾನ್ಯ ಉಚ್ಚ ನ್ಯಾಯಾಲಯವು ಪೋಲಿಸರಿಗೆ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ತನಿಖೆ ನಡೆಸುವಂತೆ ನಿರ್ದೇಶಿಸಿತು.
Case of rape registered against Lenin Karuppan after directions from Hon’ble High Court of Karnataka
೨೦೧೩ ಮಾರ್ಚಿನಲ್ಲಿ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ಪುಷ್ಪರವರು ಸಲ್ಲಿಸಿದ್ದ ಅರ್ಜಿ ಡಬ್ಲೂಪಿ ೧೦೮೧೫/೨೦೧೧ ವಿಲೇವಾರಿ ಮಾಡಿತ್ತು , ಇದರಲ್ಲಿ ಡಿಸೆಂಬರ್ ೩೦ ೨೦೧೦ರಲ್ಲಿ ಲೆನಿನ್ ಕರುಪ್ಪನ್ ವಿರುದ್ಧ ಅತ್ಯಾಚಾರ ಯತ್ನ, ಸುಲಿಗೆ ಮತ್ತು ಜೀವ ಬೆದರಿಕೆ ದಾಖಲಿಸಿದ ದೂರಿಗೆ ಪುಷ್ಪರವರು ತಮಗೆ ಪೋಲಿಸರಿಂದ ನ್ಯಾಯ ನಿರಾಕರಣೆಯಾಗಿದೆ ಎಂದಿದ್ದರು. ಆದರೆ ಪೋಲಿಸರು ಪ್ರಕರಣವನ್ನು ಮುಚ್ಚಿ ಹಾಕಿದ್ದರು.
೨೨ ಜನವರಿ ೨೦೧೮
ಈ ದಿನ ಗೌರವಾನ್ವಿತ ಸೆಷನ್ಸ್ ನ್ಯಾಯಾಲಯವು ತನಿಖೆಯ ನಂತರ ಆರೋಪಪಟ್ಟಿ ಸಲ್ಲಿಸುವಂತೆ ಆದೇಶಿಸಿತು ಮತ್ತು ಆರೋಪಗಳನ್ನು ಕೆಳಕಂಡಂತೆ ಭಾ.ದಂ.ಸಂ ಯಡಿಯಲ್ಲಿ ಉಲ್ಲೇಖಿಸಿದೆ- ಸೆ ೩೭೬(ಅತ್ಯಾಚಾರ) ೩೪೧ (ಅಕ್ರಮ ನಿರೋಧ) ೫೦೬( ಕ್ರಿಮಿನಲ್ ಬೆದರಿಕೆ). ೫೦೪( ಶಾಂತಿ ಭಂಗ ತರುವ ಉದ್ದೇಶದಿಂದ ಉದ್ದೇಶಿತ ಅವಮಾನ) ಮತ್ತು ಸೆಕ್ಷೆನ್ ೩(೧)(ಆರ್) ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆ (ಪ.ಜಾ/ಪ.ಪಂ ಕ್ಕೆ ಸೇರಿದ ವ್ಯಕ್ತಿಯ ಸಾರ್ವತ್ರಿಕವಾಗಿ ಉದ್ದೇಶಿತ ಅವಮಾನ ಅಥವಾ
ಬೆದರಿಕೆ) ಪ್ರಕರಣವು ಗಂಭೀರ ಸ್ವರೂಪದಾಗಿದ್ದು , ಪ.ಜಾ/ಪ.ಪಂ ಕಾಯ್ದೆಯಲಿನ ಕಾನೂನಿನ ಅನ್ವಯ ಈ ಪ್ರಕರಣ ಎರಡು ತಿಂಗಳ ಕಾಲಾವಧಿಯಲ್ಲಿ ಮುಗಿಯಬೇಕು.
ಸ್ವಾಮಿ ನಿತ್ಯಾನಂದರ ವಿರುದ್ಧ ದೊಡ್ಡ ಪಿತೂರಿಯಲ್ಲಿ,ಲೆನಿನ್ ಕರುಪ್ಪನ್ ತನ್ನ ಜೊತೆಗಾರರೊಂದಿಗೆ ಕೂಡಿ ಒಂದು ಸಂಚಲನಾತ್ಮಕ ವಿಡಿಯೋವನ್ನು ಸೃಷ್ಟಿಸಿ, ಅದರಲ್ಲಿ ಸ್ವಾಮಿ ನಿತ್ಯಾನಂದರು ನಟಿಯ ಜೊತೆ ಇರುವಂತೆ ತೋರಿಸಿ, ಮಾಧ್ಯಮಗಳಲ್ಲಿ ಸಂಚಲನವಾಗುವಂತೆ ಮಾಡಿ, ೨೦೧೦ ರಲ್ಲಿ ಸ್ವಾಮಿ ನಿತ್ಯಾನಂದರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದ.
ಈ ತೀರ್ಪು ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಸ್ವಾಮಿ ನಿತ್ಯಾನಂದರ ಪರವಾಗಿ ಬಂದಿರುವುದು ಸರಣಿ ತೀರ್ಪುಗಳನ್ನು ಸಮರ್ಥಿಸುತ್ತದೆ. ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ೨೦೧೨ರಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮಿ ನಿತ್ಯಾನಂದರ ವಿರುದ್ದ ದಾಖಲಿಸಿದ ಕೇಸ್ ಗಳನ್ನು ರದ್ದುಗೊಳಿಸಿತ್ತು., ಕೆಲ ತಿಂಗಳ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯವು ತನಿಖಾ ತಂಡಕ್ಕೆ ತಮ್ಮ ತನಿಖೆಯಲ್ಲಿ ಸ್ವಾಮಿ ನಿತ್ಯಾನಂದರ ಪರವಾಗಿ ಕಂಡು ಬರು ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು. ಕೆಲ ವಾರಗಳ ಹಿಂದೆ, ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್, ಮೈಸೂರು, ಇವರು ಸ್ವಾಮಿ ನಿತ್ಯಾನಂದರ ವಿರುದ್ದ ಅಸಹಜ ಲೈಂಗಿಕತೆಯ ಸುಳ್ಳು ಆರೋಪ ಮಾಡಿದ ವಿನಯ್ ಭಾರದ್ವಾಜ್ ಗೆ ಸುಳ್ಳು ಆಪಾದನೆ ಮಾಡಿದ್ದಕ್ಕೆ ಎರಡು ಕೋಟಿ ಎಪ್ಪತೈದು ಲಕ್ಷ ರೂಪಾಯಿ ೯% ಬಡ್ಡಿ ಸಹಿತ ಪ್ರಕರಣ ದಾಖಲಾದ ದಿನಾಂಕದಿಂದ ಅನ್ವಯವಾಗುವಂತೆ ಜುಲ್ಮಾನೆ ವಿಧಿಸಿದೆ.
ಈ ಸಾಕ್ಷ್ಯಾಧಾರಗಳಲ್ಲಿ ಅತ್ಯಾಚಾರಕ್ಕೆ ಒಳಗಾದೆ ಎಂದು ಸುಳ್ಳು ಆರೋಪ ಮಾಡಿದ ಆರತಿ ರಾವ್ ಅವರ ೨೦೦೪ರಿಂದ- ೨೦೦೯ ವರೆಗಿನ ವೈದ್ಯಕೀಯ ವರದಿಗಳಾಗಿದ್ದು, ಇದರಲ್ಲಿ ಆಕೆಗೆ ಇದ್ದ ೪ ಅತ್ಯಂತ ಸಾಂಕ್ರಾಮಿಕ ಮತ್ತು ಗುಣಪಡಿಸಲಾಗದ ಎಸ್ ಟಿ ಡಿ, ಅವುಗಳಲ್ಲಿ ಕೆಲವು ಬರೀ ಸ್ಪರ್ಶದಿಂದ ಬರುವಂತಹ, ಆಕೆ ೨೦೦೯ರ ಮಧ್ಯಭಾಗದಲ್ಲಿ ಈ-ಮೇಲ್ ನಲ್ಲಿ ತಾನೇ ಒಪ್ಪಿಕೊಂಡ, ಆಕೆ ಹೇಳಿದ ಎಂದೂ ನಡೆಯದ ಅತ್ಯಾಚಾರದ ದಿನಾ0ಕದ ಆರು ತಿಂಗಳ ನಂತರ ತನಗೆ ಸ್ವಾಮಿ ನಿತ್ಯಾನಂದರೊಡನೆ ದೈಹಿಕ ಸಂಬಂಧ ಇರಲ್ಲಿಲ್ಲ, ಅತ್ಯಾಚಾರ ನಡೆದ ದಿನಾಂಕ ಸ್ಥಳಗಳ ಬಗ್ಗೆ ನೀಡಿರುವ ಹಲವಾರು ಗೊಂದಲಮಯ ಸಾಕ್ಷ್ಯಗಳು, ಸ್ವಾಮಿ ನಿತ್ಯಾನಂದರ ವೈದ್ಯಕೀಯ ವರದಿಗಳು ಅವರಿಗೆ ಯಾವುದೇ ರೀತಿಯ ಎಸ್ ಟಿ ಡಿ ಇಲ್ಲದಿರುವುದರ ಬಗ್ಗೆ, ಯೋಗಿಕ ದೇಹ ಹೊಂದಿದ್ದು ಯಾವುದೇ ಲೈಂಗಿಕ ಕ್ರಿಯೆಯ ಸಾಮರ್ಥ್ಯವಿಲ್ಲವೆಂಬ ವರದಿ, ಅತ್ಯಂತ ಸೂಕ್ಷ್ಮವಾದ ರ0ಜಿತಾಳ ಹೇಳಿಕೆಯಾದ ತಾನು ಸ್ವಾಮಿ ನಿತ್ಯಾನಂದರ ಜೊತೆ ಇರುವ ಆ ವಿಡಿಯೋ ನಕಲಿ ಮತ್ತು ಉದ್ದೇಶಪೂರ್ವಕವಾಗಿ ರೂಪಾಂತರಿಸಲಾಗಿದೆ.
ಲೆನಿನ್ ಕರುಪ್ಪನ್ ಮತ್ತು ಆರತಿ ರಾವ್ ಸ್ವಾಮಿ ನಿತ್ಯಾನಂದರ ವಿರುದ್ದ ಬ್ಲ್ಯಾಕ್ ಮೇಲ್, ಸುಲಿಗೆ, ಮತ್ತು ಪಿತೂರಿಯ ಅಪರಾಧದ ಪ್ರಕರಣದಲ್ಲಿ ಚೆನ್ನೈ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
Below is the order.
Related news:
https://nithyanandatruth.org/2017/12/20/ramnagara-civil-court-issues-summons-samaya-news/
https://nithyanandatruth.org/2017/09/07/my-ex-husband-planned-the-attack-against-nithyananda/
https://nithyanandatruth.org/2017/09/07/the-conspiracy-against-paramahamsa-nithyananda-timeline/