ಸಮಯ ನ್ಯೂಸ್ ಪ್ರಮುಖ ಆಂಕರ್ ರಂಗನಾಥ ಭಾರದ್ವಾಜ್ ಹಾಗೂ ಮತ್ತು ಇನ್ನಿಬ್ಬರು ಕ್ರಿಮಿನಲ್ ಪಿತುರಿ , ಕ್ರಿಮಿನಲ್ ಬೆದರಿಕೆ ಹಾಗೂ ಶಾಂತಿ ಉಲ್ಲಂಘನೆ ಮತ್ತು ಇನ್ನು ಹಲವಾರು ಅಪರಾಧದಲ್ಲಿ ಭಾಗಿ ಆಗಿರುವುದು.
ಕನ್ನಡ ಸುದ್ದಿ ವಾಹಿನಿ ‘ಸಮಯಾ ನ್ಯೂಸ್’, ಈ ವಾಹಿನಿಯ ಮುಖ್ಯ ಸಂಪಾದಕ ಮತ್ತು ನ್ಯೂಸ್ ಆಂಕರ್ ರಂಗನಾಥ್ ಭಾರದ್ವಾಜ್, ಚಲನಚಿತ್ರ ನಿರ್ಮಾಪಕ ಮದನ್ ಪಟೇಲ್ ಮತ್ತು ಸ್ವಯಂ-ಘೋಷಿತ ಕಾರ್ಯಕರ್ತ ಭೀಮಾ ಶಂಕರ್ ಪಾಟೀಲ್ – ಈ ನಾಲ್ವರ ವಿರುದ್ಧ ಕೇಸ್ ದಾಖಲು ಮಾಡಿ ಸಮನ್ಸ್ ಜಾರಿ ಮಾಡಬೇಕೆಂದು ರಾಮನಗರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ರ (ಜೆಎಮ್ಎಫ್ ಸಿ) ಗೌರವಾನ್ವಿತ ನ್ಯಾಯಾಲಯವು ಆದೇಶ ನೀಡಿದೆ. ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗಕ್ಕೆ ಪ್ರೇರೇಪಿಸುವ ಸಲುವಾಗಿ ಉದ್ದೇಶಪೂರ್ವಕ ಅವಹೇಳನ, ಕ್ರಿಮಿನಲ್ ಪಿತೂರಿ, ಸಾಮಾನ್ಯ ಉದ್ದೇಶದ ಮುಂದುವರಿಕೆಗಾಗಿ ಅನೇಕರು ಮಾಡಿದ ಜಂಟಿ ಕೃತ್ಯಗಳು ಮತ್ತು ಸ್ವಾಮಿ ನಿತ್ಯಾನಂದರ ಬಗ್ಗೆ ಮಾನನಷ್ಟ – ಈ ಎಲ್ಲಾ ಅಪರಾಧಗಳನ್ನು ಒಳಗೊಂಡಂತೆ ಹಲವಾರು ಗಂಭೀರ ಅಪರಾಧಗಳಿಗಾಗಿ ಗೌರವಾನ್ವಿತ ನ್ಯಾಯಾಲಯವು ಈ ನಾಲ್ವರ ವಿರುದ್ಧ ಕೇಸ್ ದಾಖಲಿಸಿ ಸಮನ್ಸ್ ನೀಡಿದೆ.
ಸಮಯಾ ನ್ಯೂಸ್ ೨೦೧೪ ರಿಂದಲೂ ವದಂತಿಗಳು, ಸುಳ್ಳು ಸುದ್ದಿಗಳು, ಮಾನನಷ್ಟ ಹೇಳಿಕೆಗಳು ಮತ್ತು ಕಾರ್ಯಕ್ರಮಗಳನ್ನು ಸುದ್ದಿ ಸಂಚಿಕೆ ಮತ್ತು ಪ್ಯಾನಲ್ ಚರ್ಚೆಗಳನ್ನು ಪ್ರಸಾರ ಮಾಡುತ್ತಲೇ ಬಂದಿದೆ. ಗೌರವಾನ್ವಿತ ನ್ಯಾಯಾಲಯವು ಸಮಯಾ ನ್ಯೂಸ್ ವಾಹಿನಿಯು ಕಾನೂನನ್ನು ತನ್ನ ಕೈಗೆ ತೆಗೆದುಕೊಂಡಿದೆ ಮತ್ತು ಈಗ ಭಾರತದಲ್ಲಿ ಸಾಮಾನ್ಯ ವಿದ್ಯಮಾನವೇ ಆಗಿರುವಂತೆ “ಮಾಧ್ಯಮ ವಿಚಾರಣೆ”ಯನ್ನೂ ತಾನೇ ನಡೆಸಿದೆ ಎಂದು ಗಮನಿಸಿತು. ಸಮಯಾ ನ್ಯೂಸ್ ಮತ್ತು ರಂಗನಾಥ ಭರಧ್ವಾಜ್ ಅವರು ಸುಳ್ಳು ವದಂತಿಗಳು, ಮಾನಹಾನಿ ಕಾರ್ಯಕ್ರಮಗಳು ಇತ್ಯಾದಿಗಳನ್ನು ಪ್ರಸಾರ ಮಾಡುವುದರಲ್ಲಿ “ತಮ್ಮನ್ನು ತಾವೇ ನಿಗ್ರಹಿಸಿಕೊಳ್ಳಬೇಕಿತ್ತು, ಬದಲಿಗೆ ಇಂತಃ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಲೇ ಹೋದರು” ಎಂದೂ ಗೌರವಾನ್ವಿತ ನ್ಯಾಯಾಲಯವು ಹೇಳಿಕೆ ನೀಡಿದೆ.
ತಾನು ನಿರ್ಮಿಸಿರುವ ‘ಸತ್ಯಾನಂದ’ ಎಂಬ ಚಲನಚಿತ್ರವು ಸ್ವಾಮಿ ನಿತ್ಯಾನಂದರ ಜೀವನವನ್ನು ಆಧರಿಸಿದೆ ಎಂದು ಹೇಳಿಕೊಂಡಿರುವ ಚಲನಚಿತ್ರ ನಿರ್ಮಾಪಕ ಮದನ್ ಪಟೇಲರನ್ನು ಕೋರ್ಟ್ ತೀವ್ರ ತರಾಟೆ ತೆಗೆದುಗೊಂಡಿದೆ. ಈ ಚಲನಚಿತ್ರವನ್ನು ನಗರದ ಗೌರವಾನ್ವಿತ ಸಿವಿಲ್ ನ್ಯಾಯಾಲಯವು ತೀವ್ರವಾಗಿ ಖಂಡಿಸಿದೆ ಮತ್ತು ಈ ಚಲನಚಿತ್ರದ ಮೇಲೆ ಭಾರೀ ‘ಸೆನ್ಸಾರ್ ಕಟ್’ಗಳನ್ನು ಮಾಡಬೇಕೆಂದು ಆದೇಶಿಸಿದೆ.
ಸ್ವಾಮಿ ನಿತ್ಯಾನಂದರ ಇಮೇಜ್ ಮತ್ತು ಚಾರಿತ್ರ್ಯವಧೆ ಮಾಡುತ್ತಾ, ಸ್ವಾಮಿ ನಿತ್ಯಾನಂದರ ಮತ್ತು ಅವರ ಸಂಸ್ಥೆಗಳ ಖ್ಯಾತಿಗೆ ಚ್ಯುತಿ ಬರುವಂತೆ ಪಿತೂರಿ ಮಾಡುವ ಉದ್ದೇಶದಿಂದ ದೂಷಿತರು “ವಿವಿಧ ಕಾರ್ಯಕ್ರಮಗಳ ಪ್ರಸಾರ, ಪ್ರಕಟಣೆ, ಎಡಿಟಿಂಗ್ ಇತ್ಯಾಾದಿ ನೇದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದನ್ನು ನ್ಯಾಯಾಲಯವು ಗ್ರಹಿಸಿದೆ.
ಹೇಸಿಗೆಯ ಭಾಷೆ ಬಳಸಿ ನಿಂದನೆ, ಕ್ರಿಮಿನಲ್ ಬೆದರಿಕೆ, ಸ್ವಾಮಿ ನಿತ್ಯಾನಂದರ ಜೀವಕ್ಕೆ ಬೆದರಿಕೆಯೊಡ್ಡುವಂತ ತೀವ್ರತರವಾದ ಅಪರಾಧಗಳು ನಡೆದಿರುವುದನ್ನು ನ್ಯಾಯಾಲಯ ಗ್ರಹಿಸಿದೆ.
ಸ್ವಾಮಿ ನಿತ್ಯಾನಂದರ ಪರವಾಗಿ ನೀಡಲಾಗಿರುವ ತೀರ್ಪುಗಳ ಸರಣಿಯಲ್ಲಿ ಈ ತೀರ್ಪು ಸೇರಿದೆ.
ಸ್ವಾಮಿ ನಿತ್ಯಾನಂದರು ನಟಿ ರಂಜಿತಾರ ಜೊತೆ ಇರುವಂತೆ ರೂಪಾಂತರ ಮಾಡಿದ ವಿಡಿಯೋದ ಪ್ರಸಾರದ ನಂತರ ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ ಆರೋಪಗಳು ಒಂದೊಂದಾಗಿ ಸುಳ್ಳು ಎಂದು ತೀರ್ಪು ಬರುತ್ತಿರುವ ಸರಣಿಯಲ್ಲಿ ಈ ತೀರ್ಪು ಸಹ ಸೇರಿದೆ.
೨೦೧೭ ಡಿಸೆಂಬರ್ ೭ರಂದು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ಮೈಲಿಗಲ್ಲು ತೀರ್ಪು ನೀಡುತ್ತಾ ಉದ್ದೇಶ್ಯಪೂರಕವಾಗಿ ಸಾಕ್ಷ್ಯಾಧಾರಗಳನ್ನು ನಿಗ್ರಹಿಸಿದ್ದಕ್ಕಾಗಿ ತೀವ್ರತರ ಆಕ್ಷೇಪಣೆ ವ್ಯಕ್ತಪಡಿಸುತ್ತಾ ಇದರಲ್ಲಿ ನಟಿ ರಂಜಿತಾಳ ಹೇಳಿಕೆಯಾದ ಸ್ವಾಮಿ ನಿತ್ಯಾನಂದರ ಜೊತೆ ಇರುವಂತೆ ತೋರುವ ವಿಡಿಯೋ ರೂಪಾಂತರ ಮಾಡಿದ ನಕಲಿ ವಿಡಿಯೋ ಹಾಗು ಪಿತೂರಿಗಾರರಾದ ಲೆನಿನ್ ಕರುಪ್ಪನ್, ಸುಳ್ಳು ಅತ್ಯಾಚಾರ ಬಲಿಪಶು ಆರತಿ ರಾವ್ ಮತ್ತು ಸುಳ್ಳು ಸಾಕ್ಷಿ ವಿನಯ್ ಭಾರದ್ವಾಜ ಅವರ ವಿರುದ್ಧ ಅನೇಕ ಸಾಕ್ಷಿಗಳು ಇರುವುದರ ಬಗ್ಗೆ ಮತ್ತು ಸ್ವಾಮಿ ನಿತ್ಯಾನಂದರ ಪರವಾಗಿರುವ ಸಾಕ್ಷಿಗಳು ಇರುವುದರ ಬಗ್ಗೆ.ಈ ಸಾಕ್ಷ್ಯಾಧಾರಗಳಲ್ಲಿ ಅತ್ಯಾಚಾರಕ್ಕೆ ಒಳಗಾದೆ ಎಂದು ಸುಳ್ಳು ಆರೋಪ ಮಾಡಿದ ಆರತಿ ರಾವ್ ಅವರ ೨೦೦೪ರಿಂದ- ೨೦೦೯ ವರೆಗಿನ ವೈದ್ಯಕೀಯ ವರದಿಗಳಾಗಿದ್ದು, ಇದರಲ್ಲಿ ಆಕೆಗೆ ಇದ್ದ ೪ ಅತ್ಯಂತ ಸಾಂಕ್ರಾಮಿಕ ಮತ್ತು ಗುಣಪಡಿಸಲಾಗದ ಎಸ್ ಟಿ ಡಿ, ಅವುಗಳಲ್ಲಿ ಕೆಲವು ಬರೀ ಸ್ಪರ್ಶದಿಂದ ಬರುವಂತಹ, ಆಕೆ ೨೦೦೯ರ ಮಧ್ಯಭಾಗದಲ್ಲಿ ಈ-ಮೇಲ್ ನಲ್ಲಿ ತಾನೇ ಒಪ್ಪಿಕೊಂಡ, ಆಕೆ ಹೇಳಿದ ಎಂದೂ ನಡೆಯದ ಅತ್ಯಾಚಾರದ ದಿನಾ0ಕದ ಆರು ತಿಂಗಳ ನಂತರ ತನಗೆ ಸ್ವಾಮಿ ನಿತ್ಯಾನಂದರೊಡನೆ ದೈಹಿಕ ಸಂಬಂಧ ಇರಲ್ಲಿಲ್ಲ, ಅತ್ಯಾಚಾರ ನಡೆದ ದಿನಾಂಕ ಸ್ಥಳಗಳ ಬಗ್ಗೆ ನೀಡಿರುವ ಹಲವಾರು ಗೊಂದಲಮಯ ಸಾಕ್ಷ್ಯಗಳು, ಸ್ವಾಮಿ ನಿತ್ಯಾನಂದರ ವೈದ್ಯಕೀಯ ವರದಿಗಳು ಅವರಿಗೆ ಯಾವುದೇ ರೀತಿಯ ಎಸ್ ಟಿ ಡಿ ಇಲ್ಲದಿರುವುದರ ಬಗ್ಗೆ, ಯೋಗಿಕ ದೇಹ ಹೊಂದಿದ್ದು ಯಾವುದೇ ಲೈಂಗಿಕ ಕ್ರಿಯೆಯ ಸಾಮರ್ಥ್ಯವಿಲ್ಲವೆಂಬ ವರದಿ.ಲೆನಿನ್ ಕರುಪ್ಪನ್ ಮತ್ತು ಆರತಿ ರಾವ್ ಸ್ವಾಮಿ ನಿತ್ಯಾನಂದರ ವಿರುದ್ದ ಬ್ಲ್ಯಾಕ್ ಮೇಲ್, ಸುಲಿಗೆ, ಮತ್ತು ಪಿತೂರಿಯ ಅಪರಾಧದ ಪ್ರಕರಣದಲ್ಲಿ ಚೆನ್ನೈ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ನ್ಯಾಯಾಲಯದ ಆದೇಶ ಪ್ರೀತಿಯನ್ನು ಕೆಳಗೆ ಲಗತ್ತಿಸಲಾಗಿದೆ.
Read the article in other languages