೭ ಡಿಸೆಂಬರ್ ೨೦೧೭
Original SC order link : http://supremecourtofindia.nic.in/supremecourt/2016/33518/33518_2016_Judgement_07-Dec-2017.pdf
ಸ್ವಾಮಿ ನಿತ್ಯಾನಂದರಿಗೆ ಮಹತ್ತರವಾದ ಕಾನೂನು ಹಾಗು ನೈತಿಕ ವಿಜಯ: ಭಾರತದ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು, ಸ್ವಾಮಿ ನಿತ್ಯಾನಂದರು ನಟಿಯೊಬ್ಬಳ ಜೊತೆ ಇರುವಂತೆ ತೋರುವ ವಿಡಿಯೋವನ್ನು ನಕಲಿ ಎಂದು ಹೇಳುವ ದಾಖಲೆ,, ಸಾಕ್ಷಿಗಳು ಸ್ವಾಮಿ ನಿತ್ಯಾನಂದರ ಪರವಾಗಿಯೇ ಇದೆ ಮತ್ತು ಅತ್ಯಾಚಾರಕ್ಕೆ ಒಳಗಾದೆ ಎಂದು ಸುಳ್ಳು ಆರೋಪ ಮಾಡಿರುವವರನ್ನು ಬಹಿರಂಗ ಪಡಿಸಿ, ಇದನ್ನೆಲ್ಲಾ ನ್ಯಾಯಾಲಯದಿಂದ ನಿಗ್ರಹಿಸಿ ಇಡಲಾಗಿದೆ. ಯಾವುದೇ ದಾಖಲೆ ಪುರಾವೆಗಳನ್ನು ನಿಗ್ರಹಿಸಿ ಇಡುವುದು ಸಲ್ಲದು, ಅವು ಪ್ರಕರಣದ ಅವಿಭಾಜ್ಯ ಅಂಗ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಸ್ವಾಮಿ ನಿತ್ಯಾನಂದರಿಗೆ ಆಗಿರುವ ಸಮಗ್ರ ಅನ್ಯಾಯದ ಬಗ್ಗೆ, ಅವರ ವಿರುದ್ದ ಮಾಡಲಾದ ಸುಳ್ಳು ಅತ್ಯಾಚಾರ ಆರೋಪದ ಮತ್ತು ಅವರ ಮುಗ್ಧತೆಯ ಬಗೆಗಿನ ಅವಿವಾದಿತ ಪುರಾವೆಗಳನ್ನು ನಿಗ್ರಹಿಸಿ ಇಟ್ಟ ಕರ್ನಾಟಕ ಸಿ ಐ ಡಿ ಯನ್ನು ತೀವ್ರವಾಗಿ ತೆಗೆದುಕೊಂಡಿತು.
ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಸಕಲ ಅವಿವಾದಿತ ದಾಖಲೆ ಮತ್ತು ಸಾಕ್ಷಿ ಪುರಾವೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಇವು ನ್ಯಾಯಾಲಯದ ವಿವಿಧ ದಾಖಲೆಗಳ ಭಾಗವೂ ಆಗಿರುತ್ತದೆ ಎಂದಿದೆ.
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಮಾಧ್ಯಮಗಳ ಹಸ್ತಕ್ಷೇಪದಿಂದ ಮುಕ್ತವಾದ ನಿಷ್ಪಕ್ಷಪಾತ ತನಿಖೆಯ ಅಗತ್ಯವನ್ನು, ಪಟ್ಟಭದ್ರ ಹಿತಾಸಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಓರ್ವ ಮುಗ್ಧನನ್ನು ಮಾಧ್ಯಮಗಳೆ ವಿಚಾರಣೆಗೆ ಒಳಪಡಿಸಿ ತನ್ನ ಮುಗ್ಧತೆ ಸಾಬೀತು ಪಡಿಸುವವರೆಗೂ ಅಪರಾಧಿ ಎಂಬಂತೆ ಬಿಂಬಿಸದಂತೆ ನ್ಯಾಯಾಂಗ ಎತ್ತಿ ಹಿಡಿದಿದೆ.
ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ತೀರ್ಪು ನೀಡುತ್ತಾ, ಗೌರವಾನ್ವಿತ ನ್ಯಾಯಾಲಯವು ತಾನು ಈ ತಾರ್ಕಿಕ ತೀರ್ಮಾನಕ್ಕೆ ಬರಲು ಇರುವಂತಹ ಮಹತ್ತರ ದಾಖಲೆಗಳು ಸ್ವಾಮಿ ನಿತ್ಯಾನಂದರ ಪರವಾಗಿಯೇ ಇದ್ದು,ಇದನ್ನು ಉದ್ದೇಶ್ಯಪೂರ್ವಕವಾಗಿಯೇ ತನಿಖಾದಳವು ನಿಗ್ರಹಿಸಿ ಇಟ್ಟಿದ್ದು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ ವಿಚಾರಣೆ ಮುಂದುವರೆಸುವುದು ಅನ್ಯಾಯವಾಗುತ್ತದೆ ಎಂದಿದೆ.
ಸ್ವಾಮಿ ನಿತ್ಯಾನಂದರ ವಿರುದ್ಧ ದೊಡ್ಡ ಪಿತೂರಿಯಲ್ಲಿ,ಲೆನಿನ್ ಕರುಪ್ಪನ್ ತನ್ನ ಜೊತೆಗಾರರೊಂದಿಗೆ ಕೂಡಿ ಒಂದು ಸಂಚಲನಾತ್ಮಕ ವಿಡಿಯೋವನ್ನು ಸೃಷ್ಟಿಸಿ, ಅದರಲ್ಲಿ ಸ್ವಾಮಿ ನಿತ್ಯಾನಂದರು ನಟಿಯ ಜೊತೆ ಇರುವಂತೆ ತೋರಿಸಿ, ಮಾಧ್ಯಮಗಳಲ್ಲಿ ಸಂಚಲನವಾಗುವಂತೆ ಮಾಡಿ, ೨೦೧೦ ರಲ್ಲಿ ಸ್ವಾಮಿ ನಿತ್ಯಾನಂದರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದ.
ಈ ತೀರ್ಪು ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಸ್ವಾಮಿ ನಿತ್ಯಾನಂದರ ಪರವಾಗಿ ಬಂದಿರುವುದು ಸರಣಿ ತೀರ್ಪುಗಳನ್ನು ಸಮರ್ಥಿಸುತ್ತದೆ. ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ೨೦೧೨ರಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮಿ ನಿತ್ಯಾನಂದರ ವಿರುದ್ದ ದಾಖಲಿಸಿದ ಕೇಸ್ ಗಳನ್ನು ರದ್ದುಗೊಳಿಸಿತ್ತು., ಕೆಲ ತಿಂಗಳ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯವು ತನಿಖಾ ತಂಡಕ್ಕೆ ತಮ್ಮ ತನಿಖೆಯಲ್ಲಿ ಸ್ವಾಮಿ ನಿತ್ಯಾನಂದರ ಪರವಾಗಿ ಕಂಡು ಬರು ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು. ಕೆಲ ವಾರಗಳ ಹಿಂದೆ, ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್, ಮೈಸೂರು, ಇವರು ಸ್ವಾಮಿ ನಿತ್ಯಾನಂದರ ವಿರುದ್ದ ಅಸಹಜ ಲೈಂಗಿಕತೆಯ ಸುಳ್ಳು ಆರೋಪ ಮಾಡಿದ ವಿನಯ್ ಭಾರದ್ವಾಜ್ ಗೆ ಸುಳ್ಳು ಆಪಾದನೆ ಮಾಡಿದ್ದಕ್ಕೆ ಎರಡು ಕೋಟಿ ಎಪ್ಪತೈದು ಲಕ್ಷ ರೂಪಾಯಿ ೯% ಬಡ್ಡಿ ಸಹಿತ ಪ್ರಕರಣ ದಾಖಲಾದ ದಿನಾಂಕದಿಂದ ಅನ್ವಯವಾಗುವಂತೆ ಜುಲ್ಮಾನೆ ವಿಧಿಸಿದೆ.
ಈ ಸಾಕ್ಷ್ಯಾಧಾರಗಳಲ್ಲಿ ಅತ್ಯಾಚಾರಕ್ಕೆ ಒಳಗಾದೆ ಎಂದು ಸುಳ್ಳು ಆರೋಪ ಮಾಡಿದ ಆರತಿ ರಾವ್ ಅವರ ೨೦೦೪ರಿಂದ- ೨೦೦೯ ವರೆಗಿನ ವೈದ್ಯಕೀಯ ವರದಿಗಳಾಗಿದ್ದು, ಇದರಲ್ಲಿ ಆಕೆಗೆ ಇದ್ದ ೪ ಅತ್ಯಂತ ಸಾಂಕ್ರಾಮಿಕ ಮತ್ತು ಗುಣಪಡಿಸಲಾಗದ ಎಸ್ ಟಿ ಡಿ, ಅವುಗಳಲ್ಲಿ ಕೆಲವು ಬರೀ ಸ್ಪರ್ಶದಿಂದ ಬರುವಂತಹ, ಆಕೆ ೨೦೦೯ರ ಮಧ್ಯಭಾಗದಲ್ಲಿ ಈ-ಮೇಲ್ ನಲ್ಲಿ ತಾನೇ ಒಪ್ಪಿಕೊಂಡ, ಆಕೆ ಹೇಳಿದ ಎಂದೂ ನಡೆಯದ ಅತ್ಯಾಚಾರದ ದಿನಾ0ಕದ ಆರು ತಿಂಗಳ ನಂತರ ತನಗೆ ಸ್ವಾಮಿ ನಿತ್ಯಾನಂದರೊಡನೆ ದೈಹಿಕ ಸಂಬಂಧ ಇರಲ್ಲಿಲ್ಲ, ಅತ್ಯಾಚಾರ ನಡೆದ ದಿನಾಂಕ ಸ್ಥಳಗಳ ಬಗ್ಗೆ ನೀಡಿರುವ ಹಲವಾರು ಗೊಂದಲಮಯ ಸಾಕ್ಷ್ಯಗಳು, ಸ್ವಾಮಿ ನಿತ್ಯಾನಂದರ ವೈದ್ಯಕೀಯ ವರದಿಗಳು ಅವರಿಗೆ ಯಾವುದೇ ರೀತಿಯ ಎಸ್ ಟಿ ಡಿ ಇಲ್ಲದಿರುವುದರ ಬಗ್ಗೆ, ಯೋಗಿಕ ದೇಹ ಹೊಂದಿದ್ದು ಯಾವುದೇ ಲೈಂಗಿಕ ಕ್ರಿಯೆಯ ಸಾಮರ್ಥ್ಯವಿಲ್ಲವೆಂಬ ವರದಿ, ಅತ್ಯಂತ ಸೂಕ್ಷ್ಮವಾದ ರ0ಜಿತಾಳ ಹೇಳಿಕೆಯಾದ ತಾನು ಸ್ವಾಮಿ ನಿತ್ಯಾನಂದರ ಜೊತೆ ಇರುವ ಆ ವಿಡಿಯೋ ನಕಲಿ ಮತ್ತು ಉದ್ದೇಶಪೂರ್ವಕವಾಗಿ ರೂಪಾಂತರಿಸಲಾಗಿದೆ.
ಲೆನಿನ್ ಕರುಪ್ಪನ್ ಮತ್ತು ಆರತಿ ರಾವ್ ಸ್ವಾಮಿ ನಿತ್ಯಾನಂದರ ವಿರುದ್ದ ಬ್ಲ್ಯಾಕ್ ಮೇಲ್, ಸುಲಿಗೆ, ಮತ್ತು ಪಿತೂರಿಯ ಅಪರಾಧದ ಪ್ರಕರಣದಲ್ಲಿ ಚೆನ್ನೈ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
Related news