ಫೆಬ್ರವರಿ 25, 2013 : ಕರ್ನಾಟಕ ಉಚ್ಚ ನ್ಯಾಯಾಲಯ ರಾಮನಗರ ಜಿಲ್ಲಾಧಿಕಾರಿ ಶ್ರೀ ನಿತ್ಯಾನಂದ ಸ್ವಾಮೀ ವಿರುದ್ದ ಸಲ್ಲಿಸಿದ್ದ FIR ಮತ್ತು ಅದಾ ನಂತರದ ಕ್ರಮಗಳನ್ನು ವಜಾಮಾಡಿದೆ. ಬಿಡದಿ ಪೋಲಿಸ್ ಸ್ಟೇಷನ್ ಜೂನ್ 14, 2012 ರಂದು Cr. No. 308/2012 u/s 107 r/w 151 of Cr.Pc. ಇದು ದಾಕಲಾಗಿತ್ತು.
ಬಿಡದಿ ಪೋಲಿಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ (SI) ಶ್ರೀ ನಿತ್ಯಾನಂದ ಸ್ವಾಮೀ ವಿರುದ್ದ ಮೊಕದ್ದಮೆ ದಾಖಲುಮಾಡಿ ಅವರನ್ನು ದಸ್ತಗಿರಿ ಮಾಡಿದ್ದರು. ನಂತರ ರಾಮನಗರ ಜಿಲ್ಲಾಧಿಕಾರಿ ಅವರನ್ನು 7 ದಿನಗಳು ವಿಚಾರಣೆಗೆಂದು ಮೈಸೂರಿನ ಕೇಂದ್ರ ಕಾರಗೃಹದಲ್ಲಿರಿಸಿದ್ದರು ಮತ್ತು ಅವರಿಗೆ 1 ಲಕ್ಷದ 1 ವರ್ಷದ ಬಾಂಡ್ ಸಹಿಮಾಡಲು ಆದೇಶಿಸಿದ್ದರು.
Cr. Pc. ಸೆಕ್ಷನ್ 107 ಮತ್ತು 105 ಯಾವುದೇ ಅಪರಾಧಗಳನ್ನು ಒಳಗೊಂಡಿರುವುದಿಲ್ಲ ಕೇವಲ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುತ್ತವೆ. ಈ ಸೆಕ್ಷೆನ್ ಕೆಳಗೆ ಪ್ರಕರಣದ ದಾಖಲುಮಾಡಲು (FIR) ಪೊಲೀಸರಿಗೆ ಅಧಿಕಾರವಿರುವುದಿಲ್ಲ.
ನ್ಯಾಯಾದೀಶರು ದೃಡವಾಗಿ ನೀಡಿದ ಹೇಳಿಕೆಯಲ್ಲಿ, ‘ಸೆಕ್ಷನ್ 107, 111, 116 ಮತ್ತು 151 Cr.Pc ಯಲ್ಲಿ ಎಲ್ಲಿಯೂ ಜಿಲ್ಲಾಧಿಕಾರಿಗಳಿಗೆ ಯಾರನ್ನು ವಿಚಾರಣೆಗೆ ಒಳಪಡಿಸುವ ಆದೇಶ ನೀಡುವ ಅಧಿಕಾರ ಇಲ್ಲ.’ ಎಂದರು.
ಅದಲ್ಲದೆ ಸೆಕ್ಷನ್ 151(2) of Cr.Pc ರಲ್ಲಿ ಸ್ಪಷ್ಟವಾಗಿ ತಿಳಿಸುವಂತೆ ‘ಸೆಕ್ಷನ್ 151(2) ನಲ್ಲಿ ದಸ್ತಗಿರಿಯಾದವರನ್ನು 24 ಘಂಟೆಗಳಿಗಿಂತ ಹೆಚ್ಚಿಗೆ ವಿಚಾರಣೆಗಾಗಿ ಸೆರೆಯಲ್ಲಿ ಇಡುವಂತಿಲ್ಲ’. ಉಚ್ಚ ನ್ಯಾಯಾಲಯ ಮುದುವರೆದು, ಜಿಲ್ಲಾಧಿಕಾರಿಗಳಿಗೆ ಬರವಣಿಗೆಯಲ್ಲಿ ಅವರ ಮೇಲಧಿಕಾರಿಗಳು ಅದೀಶನೀಡಿ, ಮಧ್ಯಕಾಲೀನ ಬಾಂಡ್ ನೀಡಲು ಆದೇಶಿಸಿ, ಸೆಕ್ಷನ್ 116(3) Cr.Pc ಪ್ರಕಾರ ವ್ಯಕ್ತಿಯು ಈ ಬಾಂಡ್ ಸಹಿಮಾಡಲು ವಿಫಲವಾದರೆ ಮಾತ್ರ ಅಂತಹ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ವಿರುತ್ತದೆ.
ಗಂಭೀರವಾದ ಅವೊಲೋಕನದ ನಂತರ ನ್ಯಯಾದಿಷರು ಹೀಗೆಂದರು, ‘ಸೆಕ್ಷನ್ 116(3) Cr.Pc ಪ್ರಕಾರ ಜಿಲ್ಲಾಧಿಕಾರಿಗೆ ಯಾವುದೇ ಅಧಿಕಾರವಿಲ್ಲದಿರುವುದರಿಂದ ಶ್ರೀ ನಿತ್ಯಾನಂದ ಸ್ವಾಮಿಗಳು ಬಾಂಡ್ ಸಹಿಮಾಡುವ ಪ್ರೆಶ್ನೆಯೇ ಬರುವುದಿಲ್ಲ.’ ಹಾಗಾಗಿ ಜಿಲ್ಲಾಧಿಕಾರಿಗಳು ನೀಡಿದ ಶ್ರೀ ನಿತ್ಯಾನಂದ ಸ್ವಾಮಿಗಳ ಬಂದನದ ಆದೇಶ ಕಾನೂನು ಬಾಹಿರ. ಅಲ್ಲದೆ ಸೆಕ್ಷನ್ 107 Cr.Pc ಪ್ರಕಾರ ಕಡ್ಡಾಯವಾಗಿ ಸೆಕ್ಷನ್ 111 Cr.Pc ಯಂತೆ ಪೂರ್ವಭಾವಿಯಾಗಿ ಬರವಣಿಗೆಯಲ್ಲಿ ಬಾಂಡ್ ನಿರ್ವಹಣೆಯನ್ನು ಸ್ಪಷ್ಟಪಡಿಸಬೇಕು. ಶ್ರೀ ನಿತ್ಯಾನಂದ ಸ್ವಾಮೀ ಪ್ರಕರಣದಲ್ಲಿ ಸೆಕ್ಷನ್ 111 Cr.Pc ಪ್ರಕಾರ ತಿಳಿಸುವ ಈ ಸ್ಪಷ್ಟೀಕರಣ ಇರಲಿಲ್ಲ.
ಈ ಕಾರಣಗಳಿಗೆ ಉಚ್ಚ ನ್ಯಾಯಾಲಯ ಜಿಲ್ಲಾಧಿಕಾರಿಗಳು ನಡೆಸಿದ ಎಲ್ಲಾ ಕ್ರಮಗಳನ್ನು ಕಾನೂನು ಬಹಿರ ಮತ್ತು ಅಧಿಕಾರದ ದುರುಪಯೋಗ ಎಂದು ತೀರ್ಮಾನಿಸಿ FIR ಮತ್ತು ಜಿಲ್ಲಾಧಿಕಾರಿಗಳು ದಾಖಲಿಸಿದ ಪ್ರಕರಣಗಳನ್ನು ವಜಾಮಾಡಿದರು.
ಗೌರವಾನ್ವಿತ ಕರ್ನಾಟಕದ ಉಚ್ಚ ನ್ಯಾಯಾಲದ ತೀರ್ಪಿನ ಮಾಹಿತಿ ಇಲ್ಲಿದೆ.