ಇತ್ತೀಚಿಗೆ ಏಪ್ರಿಲ್ 2016 ಉಜ್ಜೈನ್ ಕುಂಭ ಮೇಳದಲ್ಲಿ, ಪ್ರಪಂಚದ ಪ್ರಮುಖ ಹಿಂದೂ ಧರ್ಮದ ನಾಯಕರು ಸ್ವಾಮಿಜಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಸ್ವಾಮೀಜಿ ಮಹಾನಿರ್ವಾಣಿ ಅಖಾಡದ ಮಹಾ ಮಂಡಲೇಶ್ವರರಾಗಿ ಆಯ್ಕೆಯಾಗಿದ್ದಾರೆ, ಈ ಅಖಾಡ ಸನಾತನ ಧರ್ಮದ ಅತ್ಯಂತ ಪ್ರಾಚೀನ ಸಂಸ್ಥೆಯಾಗಿದ್ದೂ ಪ್ರಸಿದ್ದ ದೇವಸ್ಥಾನಗಳ ಪಾಲನೆ ಮಾಡುತ್ತವೆ.
ಸುದ್ದಿಯ ತುಣುಕು ಇಲ್ಲಿದೆ:
“ನನಗೆ ಪರಮಹಂಸ ನಿತ್ಯಾನಂದ ಸ್ವಾಮೀ ಗಳ ಮೇಲೆ ಅಪಾರ ಮೆಚ್ಚುಗೆ ಇದೆ, ಇವರು ಹಿಂದೂ ಧರ್ಮಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.”, ABAP ಅಧ್ಯಕ್ಷರಾದ ಮಹಂತ್ ಶ್ರೀ ನರೇಂದ್ರ ಗಿರಿ ಹೇಳಿದರು.
ಶ್ರೀ ನರೇಂದ್ರ ಗಿರಿಗಳು ಕುಂಭ ಪುರಿಯಲ್ಲಿ ನಿತ್ಯಾನಂದ ಪೀಟಂ ದೇವಸ್ಥಾನದ ಉದ್ಘಾಟನೆ ಮಾಡುತ್ತಾ, ನಡೆಯುತ್ತಿದ್ದ ದ್ವಜಾರೋಣನ, ವೈದಿಕ ಪಠಣ ಮತ್ತು ಸಂಗೀತದ ನಡುವೆ. ನಿಮಗೆ ಸ್ವಾಮೀ ನಿತ್ಯಾನಂದರ ಮೇಲಿರುವ ಅಪಾದನೆಗಳ ಅರಿವಿದೆಯೇ? ಎಂದು ಕೇಳಿದಾಗ, ಅವರು ಹೀಗೆಂದರು, “ ನಾನು ಕೇಸ್ ಬಗ್ಗೆ ಹೇಳುವುದಿಲ್ಲ, ಆದರೆ ಒಂದು ಮಾತು ಸತ್ಯ ಸ್ವಾಮೀಜಿ ತಪ್ಪು ಮಾಡಿದ್ದರೆ ಮಹಾ ಮಂಡಲೇಶ್ವರರಾಗಿ ಆಯ್ಕೆಯಾಗುತ್ತಿರಲಿಲ್ಲ.”, “ ಮಾಧ್ಯಮಗಳು ಹಿಂದೂ ಧರ್ಮದ ಸನ್ಯಾಸಿಗಳ ಮೇಲಿನ ಆಪಾದನೆಗಳನ್ನು ಎಷ್ಟು ಸ್ವಾರಸ್ಯಕರವಾಗಿ ತೋರಿಸುತ್ತಾರೆ ಆದರೆ ಅವರು ನಿರಪರಾಧಿಯೆಂದು ತಿಳಿದಾಗ ಅದನ್ನು ಜನರಿಗೆ ತಿಳಿಸಲು ಆಸಕ್ತಿ ತೋರಿಸುವುದಿಲ್ಲ. ನಮಗೆ ಹಿಂದೂ ಧರ್ಮದ ಸನ್ಯಾಸಿಗಳ ಮೇಲಿನ ಆಪಾದನೆಯ ದಾಳಿಯಿಂದ ರಕ್ಷಿಸಲು ಒಂದು ಶಕ್ತಿಯುತ ವೇದಿಕೆಯ ಅಗತ್ಯವಿದೆ.”
ಶ್ರೀ ನರೇಂದ್ರ ಗಿರಿಯವರು ಬಹಳ ಪ್ರಭಾವಶಾಲಿ ನಾಯಕರು, ಇವರು ಅಖಾಡಾ ಪರಿಷತ್ತಿನ ಮುಖ್ಯಸ್ತರು. ಮಹಾನಿರ್ವಾಣಿ ಅಖಾಡ, ನಿರಂಜನಿ ಅಖಾಡ, ಜೂನ ಅಖಾಡ ಮುಂತಾದ, ಸುಮಾರು 10 ಲಕ್ಷ ಸಾಧುಗಳನ್ನು ಹೊಂದಿರುವ 13 ಅಖಾಡಗಳ ಆಡಳಿತ ಇವರ ಅಧಿಕಾರದಲ್ಲಿದೆ.