ಕ್ಯಾಲಿಫೋರ್ನಿಯಾ
ಯು.ಎಸ್.ಏ
೯ ಡಿಸೆಂಬರ್ ೨೦೧೭
೨೦೧೭ ರ ಡಿಸೆಂಬರ್ ೮ ರಂದು ಯು.ಎಸ್.ಏ ನ ಕೋರ್ಟಿನಲ್ಲಿ ಕನ್ನಡ ಸುದ್ದಿ ವಾಹಿನಿ ಸಮಯಾ ಟಿವಿ-ಯ ಮುಖ್ಯ ವರದಿಗಾರ ರಂಗನಾಥ್ ಭಾರಧ್ವಾಜ್ ಹಾಗೂ ಕಲಾವತಿ ಭಾರಧ್ವಾಜ್ ಅವರು ‘ಮಾನನಷ್ಟ ಮತ್ತು ನಾಗರೀಕ ಪಿತೂರಿಗಳನ್ನು ಎಸಗಿರುವಂತಹ ತಪ್ಪಿತಸ್ಥರು’ ಎಂಬ ತೀರ್ಮಾನವನ್ನು ನೀಡಲಾಗಿದೆ. ಸಮಯಾ ಟಿವಿ-ಯ ಮುಖ್ಯ ವರದಿಗಾರ ರಂಗನಾಥ್ ಭಾರಧ್ವಾಜ್ ಹಾಗೂ ಕಲಾವತಿ ಭಾರಧ್ವಾಜ್ ಅವರು ಪ.ಪೂ. ಪರಮಹಂಸ ನಿತ್ಯಾನಂದರ ಬಗ್ಗೆ ಮತ್ತು ಅವರ ಅಮೇರಿಕಾದ ಸಂಸ್ಥೆಯ ಬಗ್ಗೆ ಸುಳ್ಳು ವರದಿ ಪ್ರಸಾರ ಮಾಡಿದ್ದಕ್ಕಾಗಿ ಯು.ಎಸ್.ಏ ನ ನ್ಯಾಯಾಲಯವು ಇವರಿಬ್ಬರ ಮೇಲೆ ಐದು(೫) ಮಿಲಿಯನ್ ಡಾಲರ್ ನ ದಂಡವನ್ನು ವಿಧಿಸಿದೆ.
ಯು.ಎಸ್.ಎ ಯ ನ್ಯಾಯಾಲಯವು ಸಂಪೂರ್ಣ ವಿಚಾರಣೆಯನ್ನು ನಡೆಸಿ, ಮಗುವಿನ ಅತ್ಯಾಚಾರಿ ವಿನಯ್ ಭಾರಧ್ವಾಜನು ಹಲವು ಬಾರಿ ಮಗುವಿನ ಮೇಲೆ ಗಂಭೀರ ಅತ್ಯಾಚಾರಗಳನ್ನು ಮಾಡಿರುವಂತಹ ಅಪರಾಧಿ ಎಂದು ತೀರ್ಮಾನಿಸಿ, ಅವನಿಗೆ ೪.೭೫ ವರುಷಗಳ ಕಾಲ ಸೆರೆಮನೆ ವಾಸದ ತೀರ್ಪು ನೀಡಿದ ನಂತರವೂ – ‘ವಿನಯ್ ಭಾರದ್ವಾಜನು ಅಪರಾಧಿಯಲ್ಲ’ ಎಂದು ಘೋಷಿಸುತ್ತಿದ್ದ ಸಮಯಾ ಟಿವಿಯ ಕೃತ್ರಿಮ ಸುದ್ದಿಯು “ನ್ಯಾಯಾಲಯದ ತಿರಸ್ಕಾರ ಹಾಗೂ ‘ವಿನಯ್ ಭಾರದ್ವಾಜನು ಅಪರಾಧಿ’ ಎಂಬ ತೀರ್ಪಿನ ಬಗ್ಗೆ ಸುಳ್ಳು ಸುದ್ದಿ ಪ್ರಚಾರ ಮಾಡುವ ಯತ್ನ” ಎಂದು ಕೋರ್ಟು ಪರಿಗಣಿಸಿತು.
ಸಾರ್ವಜನಿಕ ದೂರದರ್ಶನ ಸುದ್ದಿ ವಾಹಿನಿಯಲ್ಲಿ ಪ್ರಚಾರ ಮಾಡಿ, ಅಂತರರಾಷ್ಟ್ರೀಯವಾಗಿ ಪ್ರಸಾರ ಮಾಡಿದಂತಹ ಈ ಹೇಳಿಕೆಗಳು ನ್ಯಾಯಾಲಯದ ಬಹು ಗಂಭೀರ ತಿರಸ್ಕಾರವಾಗಿದೆ, ಮತ್ತು ಸ್ವಾಮಿ ನಿತ್ಯಾನಂದರ ವಿರುದ್ಧ ಅಪ್ರಮಾಣಿಕ, ಮಾನನಷ್ಟ ಎಸಗುವಂತಹ, ದುರುದ್ದೇಶ ಪ್ರೇರಿತ ಸುಳ್ಳು, ಮಾನಹಾನೀಯ ಅಪನಿಂದನೆಗಳಾಗಿವೆ.
ಸಮಯಾ ಟಿವಿ ಮತ್ತು ಕಾರ್ಯಕ್ರಮದ ನಿರೂಪಕ ರಂಗನಾಥ ಭರಧ್ವಾಜ್ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತಹ ಕಲಾವತಿ ಭರಧ್ವಾಜ್ ಅವರ ಈ ಬಹು ಗಂಭೀರವಾದ ‘ನ್ಯಾಯಲಯವನ್ನು ತಿರಸ್ಕರಿಸುವಂತಹ ಕ್ರಿಯೆ’ಯ ವಿರುದ್ಧ ಯು.ಎಸ್.ಏ ಯ ನ್ಯಾಯಲಯವು ಬಹು ಕಟ್ಟುನಿಟ್ಟಿನ ಗಮನ ಹರಿಸಿ, ಕಠಿಣ ಕ್ರಮವನ್ನು ಕೈಗೊಂಡಿದೆ.
ಲೈಫ್ ಬ್ಲಿಸ್ ಫೌಂಡೇಷನ್ ವಿ. ಸಮಯಾ ಟಿವಿ, ಆರ್ಎಸ್ಎಮ್ ಬ್ರಾಡ್ಕಾಸ್ಟರ್ಸ್ ಪ್ರೈವೇಟ್ ಲಿಮಿಟೆಡ್, ರಂಗನಾಥ ಭಾರಧ್ವಾಜ್ ಮತ್ತು ಎ.ವಿ. ಕಲಾವತಿ ಭಾರಧ್ವಾಜ್ ಪ್ರಕರಣವನ್ನು (ಪ್ರಕರಣ ಸಂಖ್ಯೆ: ಸ್ಯಾನ್ ಬರ್ನಾರ್ಡಿನೊ ಕೌಂಟಿಯ ಕ್ಯಾಲಿಫೋರ್ನಿಯಾದ ಸುಪೀರಿಯರ್ ಕೋರ್ಟಿನಲ್ಲಿ ಸಲ್ಲಿಸಿದ ಸಿಐವಿಆರ್ಎಸ್ ೧೪೧೦೬೧೫) ಜನವರಿ ೨೦೧೪ ರಲ್ಲಿ, ದುರುದ್ದೇಶಪೂರಿತ, ಮಾನಹಾನೀಯ ಸುಳ್ಳು ಸುದ್ದಿಯ ವಾಕರಿಕೆ ಬರಿಸುವಂತಹ ಪ್ರಸಾರದ ನಂತರ ಈ ಪ್ರಕರಣದ ಜಾಹೀರಾತು ಕೋರ್ಟಿನಲ್ಲಿ ಸಲ್ಲಿಸಲಾಗಿತ್ತು.
ವಿನಯ್ ಕೆ. ಭಾರಧ್ವಾಜ್ ಬಗ್ಗೆ :
ಶಿಕ್ಷೆಗೆ ಒಳಗಾದ ಮಗುವಿನ ಅತ್ಯಾಚಾರಿ ವಿನಯ್ ಕೆ. ಭಾರಧ್ವಾಜನನ್ನು, ಆತನ ಸೆರೆಮನೆ ವಾಸದ ಶಿಕ್ಷೆಯ ನಂತರ ಯುಎಸ್ಏ ನ್ಯಾಯಾಲಯವು, ಆತನು ಒಂದು ಮಗುವಿನ ಮೇಲೆ ಎಸಗಿರುವ ಅತಿ ಹೀನಾಯಕರವಾದ, ಶೋಚನೀಯ ಕೃತ್ಯಗಳ ಸಲುವಾಗಿ, ಆತನನ್ನು ಅಮೇರಿಕಾದಿಂದ ಭಾರತಕ್ಕೆ ವಾಪಸ್ಸು ಗಡಿಪಾರು ಮಾಡಿದೆ. ಈಗ ಆತನು ಭಾರತದಲ್ಲಿ ಅಮೇರಿಕಾದ ನ್ಯಾಯಾಲಯದ ಆಳ್ವಿಕೆಯ ಮೇಲೆ ಅಕ್ಟೋಬರ್ ೧೬, ೨೦೧೭ ರಂದು ಮೈಸೂರಿನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಮ್ನ ಗೌರವಾನ್ವಿತ ನ್ಯಾಯಾಲಯವು ಎತ್ತಿ ಹಿಡಿದಿರುವಂತಹ ಮತ್ತೊಂದು ೫೦೦,೦೦೦+ ಡಾಲರ್ ದಂಡದ ತೀರ್ಪಿನಿಂದ ಕೂಡ ಪ್ರಸ್ತುತ ಕಣ್ಮರೆಯಾಗಿದ್ದಾನೆ.
ವಿನಯ್ ಕೆ. ಭಾರಧ್ವಾಜ್ ಸುಲಿಗೆ, ಬ್ಲ್ಯಾಕ್ಮೇಲ್, ಮೋಸ, ಸಂಚು ಈ ಪ್ರಕರಣದಲ್ಲಿ ಓರ್ವ ಮುಖ್ಯ ಸಂಚುಗಾರನಾಗಿದ್ದು ಹಾಗೂ ಈ ಸಂಬಂಧ ಈತ ೧೧ ಮೆಟ್ರೋಪಾಲಿಟನ್ ಕೋರ್ಟ್, ಸೈದಾಪೇಟ್, ಚೆನ್ನೈನಲ್ಲಿ ವಿಚಾರಣೆಗೆ ಒಳಗಾಗಿದ್ದಾನೆ. ಸ್ವಾಮಿ ನಿತ್ಯಾನಂದ ವಿರುದ್ಧ ೨೦೧೦ ರಲ್ಲಿ ಸಂಚುಗಾರ ಲೆನಿನ್ ಕರುಪ್ಪನ್ ಸಲ್ಲಿಸಿದ ಸುಳ್ಳು ಪ್ರಕರಣದಲ್ಲಿ ಕೂಡ ವಿನಯ್ ಕೆ. ಭಾರದ್ವಾಜ್ ಸಾಕ್ಷಿಯಾಗಿದ್ದಾನೆ. ಡಿಸೆಂಬರ್ ೭, ೨೦೧೭ ರಂದು, ಭಾರತದ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ನಿರ್ಣಾಯಕ ಸಾಕ್ಷ್ಯಾಧಾರಗಳನ್ನು ಉದ್ದೇಶಪೂರ್ವಕ ನಿಗ್ರಹ ಮಾಡಿರುವುದಾಗಿ ಸಂಚುಕಾರರಾದ ಲೆನಿನ್ ಕರುಪ್ಪನ್, ಅತ್ಯಾಚಾರದ ಸುಳ್ಳು ಬಲಿಪಶು, ಮತ್ತು ಸುಳ್ಳು ಸಾಕ್ಷಿ ವಿನಯ್ ಭಾರಧ್ವಾಜ್ ರವರ ವಿರುದ್ಧ, ಮತ್ತು ಪ.ಪೂ. ಪರಮಹಂಸ ನಿತ್ಯಾನಂದ ಅವರ ಪರವಾಗಿ ಒಂದು ಭಾರೀ ಹೆಗ್ಗುರುತಿನ ತೀರ್ಪನ್ನು ನೀಡಿತು.
ಸಂಚುಕಾರರು ನಿಗ್ರಹ ಮಾಡಿದ ಸಾಕ್ಷ್ಯಾಧಾರಗಳು ಇವನ್ನು ಒಳಗೊಂಡಿದ್ದವು –
೨೦೦೪ ರಿಂದ ೨೦೦೯ ರವರೆಗೆ ಅತ್ಯಾಚಾರ ಆಪಾದಿತೆ ಆರತಿ ರಾವ್ ಅವರ ವೈದ್ಯಕೀಯ ವರದಿಗಳು – ಅವುಗಳಲ್ಲಿ ಆಕೆಗೆ ೪ ಅತ್ಯಂತ ಸಾಂಕ್ರಾಮಿಕ ಮತ್ತು ಗುಣಪಡಿಸಲಾರದ ಎಸ್ಟಿಡಿ (ಲೈಂಗಿಕವಾಗಿ ಹರಡುವ ಕಾಯಿಲೆ) ಗಳು ಇರುವುದಾಗಿಯೂ, ಅವುಗಳಲ್ಲಿ ಕೆಲವು ಕೇವಲ ಸ್ಪರ್ಶಮಾತ್ರದಿಂದ ಹರಡಬಲ್ಲಹುದು ಎಂದೂ ಕಂಡು ಬಂದಿದೆ; ೨೦೦೯ ರ ಮಧ್ಯಭಾಗದಲ್ಲಿ ಆಪಾದಿತೆಯು ಸ್ವತಃ ಬರೆದಿರುವ ಈಮೇಲ್ (ಅಂದರೆ, ಅತ್ಯಾಚಾರ ಆರೋಪದ ‘ಕೊನೆಯ ಘಟನೆಯ ಆರು ತಿಂಗಳ ನಂತರ’) ಪ್ರಕಾರ – ‘ತನಗೆ ಸ್ವಾಮಿ ನಿತ್ಯಾನಂದರೊಂದಿಗೆ ಯಾವುದೇ ರೀತಿಯ ಲೈಂಗಿಕ ಸಂಬಂಧ ಇರಲಿಲ್ಲ’ ಎಂಬ ಹೇಳಿಕೆ; ಆಪಾದಿತೆಯ ಅತ್ಯಾಚಾರ ಆರೋಪಗಳ ಘಟನೆಗಳಲ್ಲಿ ಹಲವಾರು ದಿನಾಂಕ, ಸ್ಥಳಗಳ ವ್ಯತ್ಯಾಸ; ಸ್ವಾಮಿ ನಿತ್ಯಾನಂದರವರ ವೈದ್ಯಕೀಯ ವರದಿಗಳ ಪ್ರಕಾರ ಅವರು ಯಾವುದೇ ಎಸ್ಟಿಡಿ ಗಳನ್ನೂ ಹೊಂದಿಲ್ಲ ಮತ್ತು ಯೋಗದ ದೇಹವನ್ನು ಹೊಂದಿದ್ದು, ಯಾವುದೇ ಲೈಂಗಿಕ ಕಾರ್ಯಕ್ಕೆ ದೇಹವು ಸಮರ್ಥವಾಗಿಲ್ಲ ಎಂಬುದು; ಮಾ ರಂಜಿತಾ ಅವರು ತಮ್ಮನ್ನು ಸ್ವಾಮಿ ನಿತ್ಯಾನಂದರೊಂದಿಗೆ ಇರುವಂತೆ ತೋರಿಸುವ ವಿಡಿಯೋವು ನಕಲಿ ಮತ್ತು ರೂಪಾಂತರಗೊಳಿಸಿರುವಂತಹದ್ದು ಎಂದು ನಿರ್ಣಾಯಕ ಪುರಾವೆಗಳೊಂದಿಗೆ ನೀಡಿರುವ ಹೇಳಿಕೆ.
ಚೆನ್ನೈನಲ್ಲಿನ ವಿಚಾರಣಾ ನ್ಯಾಯಾಲಯದಲ್ಲಿ ಸಂಚುಕಾರರು ಸ್ವಾಮಿ ನಿತ್ಯಾನಂದ ಅವರ ವಿರುದ್ಧ ಎಸಗಿರುವ ಬ್ಲ್ಯಾಕ್ಮೇಲ್, ಸುಲಿಗೆ ಮತ್ತು ಕ್ರಿಮಿನಲ್ ಪಿತೂರಿಯ ಪ್ರಕರಣದಲ್ಲಿ ಪ್ರಸ್ತುತ ಕಾನೂನಿನ ಕ್ರಮ ಎದುರಿಸುತ್ತಿದ್ದಾರೆ.