ವಿನಯ ಹಾಗೂ ಸಭ್ಯತೆ ಇಲ್ಲದ ಚಿಕಣಿ ಪತ್ರಿಕಾ ಮಾಧ್ಯಮಗಳು ಸ್ವಾಮೀಜಿಯನ್ನು ‘ಸ್ವಯಂ-ನಿಯುಕ್ತ’ ಎಂದು ಹಿಯಾಳಿಸ್ತುತ್ತಿದ್ದರು, ಹೀಗಿರುವಾಗ ಅತ್ಯಂತ ಗೌರವಾನ್ವಿತ ಸನಾತನ ಹಿಂದೂ ಧರ್ಮದ ಸಂಸ್ಥಾನ, ಭಾರತದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳ ಅಭಿರಕ್ಷಕರು ಹಾಗೂ ಹಿಂದೂ ಧರ್ಮದ ಮಾಹನ್ ನಾಯಕರನ್ನು ಹೊಂದಿರುವ ಮಹಾನಿರ್ವಾಣಿ ಪೀಠ ಸಂಪೂರ್ಣ ಶೋಧನೆ ಮತ್ತು ವಿಚಾರಣೆಗಳ ನಂತರ ಸರ್ವಾನುಮತದಿಂದ ಸ್ವಾಮೀಜಿಯವರನ್ನು ತಮ್ಮ ಮುಂದಿನ ಧಾರ್ಮಿಕ ನಾಯಕರಾನ್ನಗಿ ಆಯ್ಕೆಮಾಡಿದಿದ್ದಾರೆ. ‘ಸ್ವಯಂ-ನಿಯುಕ್ತ’? ಇನ್ನಿಲ್ಲ.
ಮಹಾ ಕುಂಭ ಪುರಿ, ಪ್ರಯಾಗ್. ಮಂಗಳವಾರ 12 ಫೆಬ್ರವರಿ 2013:
ಪರಮಹಂಸ ನಿತ್ಯಾನಂದರು ಇಂದು ಪ್ರಖಾತ ಮಹಾನಿರ್ವಾಣಿ ಪೀಠದ ಅಧಿಪತಿಯ ಸ್ಥಾನದ (ಮಹಾಮಂಡಲೇಶ್ವರ) ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿಧಿವತ್ತಾಗಿ ಸ್ವೀಕರಿಸಿದರು. ಈ ಆಯ್ಕೆಯಿಂದ ಇವರು ಸನಾತನ ಧರ್ಮದ ಅತ್ಯುನ್ನತ ಮತ್ತು ಪುರಾತನ ಧಾರ್ಮಿಕ ಸಂಸ್ಥಾನದ 44 ನೆ ಅಧಿಪತಿಯಾದರು. ಅಲಹಾಬಾದ್-ಪ್ರಯಾಗ್ ನಲ್ಲಿ ಜರುಗುತ್ತಿದ್ದ ಮಹಾ ಕುಂಭ ಮೇಳದಲ್ಲಿ ಈ ಸಮಾರಂಭ ನಡೆದು ಇದು ಪರಮಹಂಸ ನಿತ್ಯಾನಂದರಿಗೆ ಮಹಾನಿರ್ವಾಣಿ ಪೀಠ ನಡೆಸಿದ ಎರಡನೇ ಪಟ್ಟಾಭಿಷೇಕ.
ಈ ಆಯ್ಕೆ ಪ್ರಜಾಪ್ರಭುತ್ವದಿಂದ ಅಸ್ತಿತ್ವದಲ್ಲಿರುವ ಎಲ್ಲಾ 43 ಮಹಾಮಂಡಲೇಶ್ವರರ, ಇದರಲ್ಲಿ 3 ಮಹಿಳಾ ಮಂಡಲೆಶ್ವರರಿದ್ದು, ಸರ್ವಾನುಮತದಿಂದ ನಡಿಯಿತು. ಪರಮಹಂಸ ನಿಥ್ಯಾನಂದರಿಗೆ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ಪಟ್ಟಾಭಿಷೇಕ ನಡೆದು ಇವರು 44 ನೇ ಮಹಾಮಂಡಲೇಶ್ವರರಾಗಿ ಈ ಗೌರವಾನ್ವಿತ ಗುಂಪಿಗೆ ಸೇರಿದರು.
ಪಟ್ಟಾಭಿಷೇಕ ಉತ್ಸವ ಮಂಗಳಕರ ಸಾಂಪ್ರದಾಯಿಕ ಪೂಜೆಯಿಂದ ಪ್ರಾರಂಭವಾಯಿತು. ಪರಮಹಂಸ ನಿತ್ಯಾನಂದರು ಈ ಪೂಜೆಯನ್ನು ಪ್ರಯಾಗ್ ಣ ಮಹಾ ಕುಂಭ ಮೇಳಕ್ಕೆ ಬಂದಿದ್ದ ಸಾವಿರಾರು ಭಕ್ತರು, ಶಿಷ್ಯರು, ಸಾಧುಗಳು, ಮತ್ತು ಯೋಗಿಗ ಸಮ್ಮುಕದಲ್ಲಿ ನಡೆಸಿದರು. ಇದನಂತರ ಇವರು ಸಾಂಪ್ರದಾಯಿಕ ಕಾವಿ ಮತ್ತು ಕುಂಕುಮವನ್ನು ಇತರ ಮಹಾಮಂಡಲೆಶ್ವರರಿಂದ ಸ್ವೀಕರಿಸಿದರು, ಇದು ಅವರ ಬೆಂಬಲ ಮತ್ತು ಸ್ವಾಗತದ ಗುರುತಾಗಿರುತ್ತದೆ. ಭಕ್ತರ ಮತ್ತು ನೋಡುಗರ ಆನಂದಕ್ಕೆ ಹೊಸದಾಗಿ ಪಟ್ಟಾಭಿಷೇಕಗೊಂಡ ಮಹಾಮಂಡಲೆಶ್ವರ ಪರಮಹಂಸ ನಿತ್ಯಾನಂದರ ಅದ್ದೂರಿ ಮೆರವಣಿಗೆ ನಡೆಯಿತು.
ಮಹಾನಿರ್ವಾಣಿ ಪೀಠ ಇಂದು 1 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳು ಮತ್ತು ಆಶ್ರಮಗಳನ್ನು ಹೊಂದಿದ್ದು, ಇದರ ಮೂಲ 8 ನೇ ಶತಮಾನದ ಶ್ರೀ ಆಧಿ ಶಂಕರರ ವರೆಗೂ ಗುರುತಿಸಬಹುದು. ಆದಿ ಶಂಕರರು ಸನಾತನ ಹಿಂದೂ ಧರ್ಮವನ್ನು ಒಗ್ಗೂಡಿಸಿ ಮತ್ತು ಬಲಪಡಿಸಲು ಈ ಸಂಸ್ಥಾನದ ಪುನರುಜ್ಜೀವನಗೊಳಿಸಿದ್ದರು. ಮಹರ್ಷಿ ಕಪಿಲ ಮುನಿ ಮಹಾನಿರ್ವಾಣಿ ಪೀಠದ ಸ್ಥಾಪಕರು ಎಂದು ನಂಬಲಾಗುತ್ತದೆ.
ಅಖಾಡಗಳಲ್ಲಿ ಮಹಾನಿರ್ವಾಣಿಗೆ ಅಗ್ರಸ್ಥಾನ, ಅಲಹಾಬಾದ್ ನ ದರಗಂಜ್, ಪವಿತ್ರ ಗಂಗಾನದಿಯ ದಡದಲ್ಲಿ ಕೇಂದ್ರಿತವಾದ ಈ ಅಖಾಡಕ್ಕೆ ಕುಂಭ ಮೇಳದಲ್ಲಿ ಕೋಟ್ಯಾಂತರ ಭಕ್ತರು ಮಾಡುವ ಪವಿತ್ರವಾದ ಶಾಹಿ ಸ್ನಾನದಲ್ಲಿ ಮೊದಲ ಸ್ನಾನದ ಗೌರವ. ಮಹಾನಿರ್ವಾಣಿ ಪೀಠದ ಸಾವಿರಾರು ಸನ್ಯಾಸಿಗಳು ಈ ಸ್ನಾನದಲ್ಲಿ ಭಾಗಮಹಿಸುತ್ತಾರೆ. 2012 ರ ಶಾಹಿ ಸ್ನಾದಲ್ಲಿ ಪರಮಹಂಸ ನಿತ್ಯಾನಂದರ ನೂರಾರು ಸನ್ಯಾಸಿಗಳು ಈ ರಾಜಯೋಗ್ಯ ಪವಿತ್ರ ಸ್ನಾನದಲ್ಲಿ ಭಾಗವಹಿಸಿದರು.
ಈ ಕೆಳಗಿನ ಸಾಕ್ಷ್ಯಾಚಿತ್ರದಲ್ಲಿ ಕುಂಭ ಮೇಳದ ಹಲವಾರು ಪೂಜ್ಯ ಹಿಂದೂ ಧರ್ಮದ ಧಾರ್ಮಿಕ ನಾಯಕರು ತಮ್ಮ ಬಿಚ್ಚುಮನಸ್ಸಿನಿಂದ ಶ್ರೀ ನಿತ್ಯಾನಂದ ಸ್ವಾಮಿಜೀಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡು ಅವರಿಗೆ ಮತ್ತು ವೈದಿಕ ಸಂಪ್ರದಾಯದ ಪುನರುಜ್ಜೀವನಕ್ಕೆ ತಮ್ಮ ಬೆಂಬಲ ಸೂಚಿಸುವುದನ್ನು ಕಾಣಬಹುದು.