ಚಿಂತಿಸಬೇಡ ವಿನಯ್…. ಈ ದಂಡವನ್ನು ಹೇಗೆ ತೆರುವುದೆಂದು ಯೋಚನೆಮಾಡಲು, ನೀನು ಮಕ್ಕಳ ಮೇಲೆ ಎಸಗಿದ ಲೈಂಗಿಕ ಕಿರುಕುಳಕ್ಕಾಗಿ 4 ವರ್ಷ 9 ತಿಂಗಳ ಜೈಲು ಶಿಕ್ಷೆಯಾಗಿದೆ, ಜೈಲಿನಲ್ಲಿ ಕೂತು ಯೋಚನೆಮಾಡಬಹುದು.
ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ – ಏಪ್ರಿಲ್ 4, 2013 – ಉನ್ನತ ಕ್ಯಾಲಿಫೋರ್ನಿಯಾ ಕೋರ್ಟ್, ಈ ಮುಂಚೆ ನವೆಂಬರ್ 2012 ರಲ್ಲಿ ವಿನಯ್ ಭಾರದ್ವಾಜ್ ಸ್ವಾಮೀ ನಿತ್ಯಾನಂದ ಮುತ್ತು ಇತರರ ಮೇಲೆ ಮಾಡಿದ್ದ ಸುಳ್ಳು ಅಸ್ವಾಭಾವಿಕ ಲೈಂಗಿಕ ಆರೋಪಗಳನ್ನು ವಜಾಮಾಡಿತ್ತು. (ಇದೇ ಸುಳ್ಳು ಅಸ್ವಾಭಾವಿಕ ಲೈಂಗಿಕ ಆರೋಪಗಳನ್ನು ಇವನು ಭಾರತದಲ್ಲೂ ಮಾಡಿದ್ದಾನೆ), ವಿನಯ್ ಭರದ್ವಾಜಗೆ ವಕೀಲರ ಶುಲ್ಕ ಮತ್ತು ಸ್ವಾಮೀ ನಿತ್ಯಾನಂದ ಮುತ್ತು ಇತರರಿಗೆ ಮಾನನಷ್ಟಕ್ಕೆ ದಂಡ ವಿಧಿಸಿತು.
ವಿಚಾರಣೆಯಲ್ಲಿ ಗೌರವಾನ್ವಿತ ನ್ಯಾಯಾದೀಶ ಕೀತ್ ಡೇವಿಸ್ ಕೇಸ್ No. CIVRS1013793 ನಲ್ಲಿ ಸುಮಾರು $400,000 ಮೊತ್ತದ ದಂಡವಿಧಿಸಿ, ಇಷ್ಟು ಧೀರ್ಘವಾದ ಮೊಕದ್ದಮೆಯಲ್ಲಿ ಅನುಸರಿಸಬೇಕಾದ್ದ ಎಲ್ಲಾ ಪ್ರಕ್ರಿಗಳಿಗೆ ಇದು ಸೂಕ್ತ ಮತ್ತು ಸಮಂಜಸವಾದ ದಂಡ ಎಂದು ಅಭಿಪ್ರಾಯ ಪಟ್ಟರು.
ಮುಂಚೆ ನವೆಂಬರ್ 2012 ರಲ್ಲಿ ಇವನ ಆರೋಪಗಳನ್ನು ಅಧಾರವಿಲ್ಲದ್ದು ಎಂದು ವಜಾಮಾಡಿ, ವಿನಯ್ ಭಾರದ್ವಾಜ್ ನ್ಯಾಯಾಲದ ಪ್ರಕ್ರಿಯೆಗಳಿಗೆ ಸಹಕರಿಸದ ಕಾರಣ ಇವನ ವಿರುದ್ದ ಎಲ್ಲಾ ಅನುಮೋದನೆಗಳನ್ನು ರದ್ದುಮಾಡಿತು.
ಸಿಯಾಟಲ್ ವಾಷಿಂಗ್ಟನ್ ನಲ್ಲಿ 4 ಭಾರಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳಕ್ಕೆ 4.75 ವರ್ಷ ಜೈಲು ಶಿಕ್ಷೆಗೊಳಗಾದ ಇದೇ ಆ ವಿನಯ್ ಭಾರದ್ವಾಜ್
ಕೇಸ್ ಚರಿತ್ರೆ:
∙ ನವೆಂಬರ್ 26, 2012 – ಕ್ಯಾಲಿಫೋರ್ನಿಯಾದ ಉಚ್ಚ ನ್ಯಾಯಾಲಯ ಸ್ಯಾನ್ ಬೆರ್ನಡಿನೋ, ಗೌರವಾನ್ವಿತ ನ್ಯಾಯಾದೀಶ ಕೀತ್ ಡಿ ಡೇವಿಸ್, ಪುರ್ವಾಗ್ರಹಿತವಾಗಿ ಸಿವಿಲ್ ಕೇಸ್ (CIV RS 1013793) ಅನ್ನು ವಜಾಮಾಡಿದರು. ಇದು ವಿನಯ್ ಕೆ ಭಾರದ್ವಾಜ್ ಶ್ರೀ ನಿತ್ಯಾನಂದ ಸ್ವಾಮೀ ಮತ್ತು ನಿತ್ಯಾನಂದ ಸಂಘದ ವಿರುದ್ದ ದಾಖಲಿಸಿದ್ದ ಕೇಸ್.
∙ ಜುಲೈ 30, 2013 – ಅಮೇರಿಕಾದ ಮೇಲ್ಮನವಿಯ ಕೋರ್ಟ್ – ನಾಲ್ಕನೆಯ ಡಿಸ್ಟ್ರಿಕ್ಟ್ ಭಾರದ್ವಾಜ ಮಾಡಿದ್ದ ಮನವಿಗಳನ್ನು, ಈ ಮೇಲೆ ಹೆಸರಿಸಿದ ಕೇಸ್ ನ್ನು ವಜಾಮಾಡಿತು.
∙ ಆಗಸ್ಟ್ 28, 2013 ಅಮೇರಿಕಾದ ಮೇಲ್ಮನವಿಯ ಕೋರ್ಟ್ – ನಾಲ್ಕನೆಯ ಡಿಸ್ಟ್ರಿಕ್ಟ್ ಭಾರದ್ವಾಜ ಕೇಸ್ ಅನ್ನು ಪುನಃ ತೆರೆಯಲು ಮಾಡಿದ ಮನವಿಯನ್ನು ತಿರಸ್ಕರಿಸಿತು.
∙ ಅಕ್ಟೋಬರ್ 18, 2013 ಅಮೇರಿಕಾದ ಮೇಲ್ಮನವಿಯ ಕೋರ್ಟ್ – ನಾಲ್ಕನೆಯ ಡಿಸ್ಟ್ರಿಕ್ಟ್ ಮತ್ತೊಮ್ಮೆ ಭಾರದ್ವಾಜ ಅಂತಿಮ ತೀರ್ಪನ್ನು ತಡೆಹಿಡಿಯಲು ಮಾಡಿದ ಮನವಿಯನ್ನು ತಿರಸ್ಕರಿಸಿತು.
..ಇಷ್ಟೆಲ್ಲಾ ಪ್ರಕ್ರಿಯೆಗಳಲ್ಲಿ ಕೆಲವನ್ನಾದರೂ ಭಾರತದ ಮಾಧ್ಯಮಗಳು ಪ್ರಸಾರ ಮಾಡುವರೆದು ನಂಬಬಹುದೇ? ಖಂಡಿತವಾಗಿ ಇಲ್ಲ, ಸ್ವಾಮೀಜಿ ಮೇಲಿನ ಅಪನಿಂದನೆ ಮತ್ತು ಸುಳ್ಳು ಸುದ್ದಿಯಿಂದ ಬಹಳಷ್ಟು ಹಣಮಾಡಿದ ಮಾಧ್ಯಮಗಳು ಸತ್ಯವನ್ನು ಪ್ರಸಾರ ಮಾಡಿ ತಾವು ಈ ಮೊದಲು ಮಾಡಿದ ಸುದ್ದಿಗಳೆಲ್ಲಾ ಸುಳ್ಳು ಎಂದು ಒಪ್ಪಿಕೊಳ್ಳ ಬೇಕಾಗುತ್ತದೆ.