ಅವರ ಪ್ರಕಾರ ಸನ್ ಟೀವಿ ದುಡ್ಡಿಗೋಸ್ಕರ ಏನನ್ನಾದರೂ ಪ್ರಸಾರ ಮಾಡುತ್ತಾರೆ, “ನಿತ್ಯನಂದರ CD ವಿಷಯದಲ್ಲೂ ಸನ್ ಟೀವಿ ವಂಚನೆಯಿಂದ ದುಡ್ಡು ಮಾಡಲು ಶಾಮಿಲಾಗಿತ್ತು”. ಇದರಿಂದ ಯಾರೂ ಆಶ್ಚರ್ಯ ಪಡೆಬೇಕಾಗಿಲ್ಲ, ಯಾಕೆಂದರೆ ಸನ್ ಟೀವಿ ವಿನಯ ಹಾಗೂ ಪ್ರಾಮಾಣಿಕತೆ ಇಲ್ಲದ ಚಿಕಣಿ (tabloid) ಪತ್ರಿಕೆಗಳಂತೆ.
ಇಗಾಗಲೇ ನಿಪುಣ ತಜ್ಞರ ವರದಿಗಳಿಂದ, ವೀಡಿಯೊ ನಕಲಿ ಎಂದು ಸಾಭಿತಾಗಿದೆ. ಕೊನೆಗೆ ಈಗ ಸನ್ ಟೀವಿಯ ಮಾಜಿ ಸಿ.ಓ.ಓ ಹಂಸರಾಜ್ ಸಕ್ಸೇನ ರಾಷ್ಟ್ರೀಯ ಮಟ್ಟದ ದೂರದರ್ಶನದಲ್ಲಿ ಬಹಿರಂಗವಾಗಿ ಇದನ್ನು ದೃಡಪಡಿಸಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ಸನ್ ಟೀವಿ ಸಿ.ಇ.ಓ ಕಲಾನಿಧಿ ಮಾರನ್ ನಡೆಸುತ್ತಿದ್ದಾರೆ ಎಂದಿದ್ದಾರೆ (ಈಗಾಗಲೇ ಸನ್ ಟೀವಿಗೆ ಸರ್ಕಾರಕ್ಕೆ ಮಾಡಿದ ವಂಚನೆಯ ಅಪರಾಧಕ್ಕಾಗಿ ಕೋರ್ಟ್ ಹಲವಾರು ಮಿಲ್ಲಿಯನ್ ದಂಡವಿಧಿಸಿರುವುದನ್ನು ಇಲ್ಲಿ ನೆನೆಯಬಹುದು).
ಈಗಾಗಲೇ ಹಲವಾರು ನ್ಯಾಯಾಲಯಗಳು ಮಾಧ್ಯಮಗಳಿಗೆ, ಗೊತ್ತಿದ್ದೂ ನಕಲಿ ವೀಡಿಯೊ ಪ್ರಸಾರಮಾಡಿದ್ದಕ್ಕೆ ಇವರ ಟೀವಿ ಚಾನೆಲ್ಗಳ ಮೇಲೆ ನಿರ್ಬಂದನಗಳನ್ನು ಹೇರಿವೆ. ಅಮೇರಿಕಾದ ನ್ಯಾಯಾಲಯಗಳು ಆರತಿ ರಾವ್ ಮತ್ತು ವಿನಯ್ ಭಾರದ್ವಾಜ್ ಹಾಕಿದ್ದ ಎಲ್ಲಾ ಕೇಸುಗಳನ್ನು ವಜಾಮಾಡಿ, ಸ್ವಾಮೀಜಿಯವರ ಅಪನಿಂದನೆಗೆ ಅಪರಾಧಕ್ಕಾಗಿ $400,000 ದಂಡವಿಧಿಸಿದೆ. ಆರತಿ ರಾವ್ ತಾನು ಕಟ್ಟಿದ್ದ ಕಥೆಗಳನ್ನು ಸಾಬೀತುಪಡಿಸಲು ವಿಫಲವಾಗಿ ಅತ್ಯಾಚಾರದ ಆರೋಪವನ್ನು ಒಪ್ಪಿಗೆಯಿಂದ ನಡೆದ ಸಂಭೋಗ ಎಂದು ಬದಲಾಯಿಸಿದ್ದಾಳೆ. ಈಗಾಗಲೇ ಕೇಳುವವರು ಯಾರೂ ಇಲ್ಲ … ಲೆನಿನ್ ಕರುಪ್ಪನ್ ಹೊರತಾಗಿ.
ಅದಾಗಿಯೂ, ಈ ಎಲ್ಲಾ ಪುರಾವೆಗಳಿದ್ದರೂ, ಲೆನಿನ್ ಕರುಪ್ಪನ್ ಬಿಟ್ಟುಕೊಡದೆ ಧೈರ್ಯದಿಂದ ಇದು ನಿಜವಾದ ವೀಡಿಯೊ ನಿತ್ಯಾನಂದನಿಂದ ನಿಜಕ್ಕೂ ಆರತಿ ರಾವ್ ಅತ್ಯಾಚಾರವಾಗಿದೆ ಎಂದು ಹೇಳುತ್ತಿದ್ದಾನೆ, ಈಗ ಆರತಿ ರಾವ್ ತಾನೇ ಇದು ಅತ್ಯಾಚಾರವಲ್ಲ ಎಂದು ಹೇಳಿದ್ದಾಳೆ. ಇವನ ಭಂಡತನವನ್ನು ಮೆಚ್ಚಬೇಕಾದುದೇ.
ಇಲ್ಲಿದೆ ಸನ್ ಟೀವಿ ಸಿ.ಓ.ಓ ಹಂಸರಾಜ್ ಸಕ್ಸೇನ ನಿತ್ಯಾನಂದ-ರಂಜಿತ ವೀಡಿಯೊ ನಕಲಿ ಎಂದು ಒಪ್ಪಿಕೊಂಡಿರುವುದು. ನಿಮಗೆ ತಮಿಳು ಅರ್ಥವಾಗದಿದ್ದರೆ ಈ ವಿಡಿಯೋನ ಕನ್ನಡದ ಅನುವಾದವನ್ನು ಈ ಕೆಳಗೆ ಓದಬಹುದು.
ಸಕ್ಷೆನ ಮತ್ತು ಇತರರು ಸನ್ ಟೀವಿ ಸ್ಥಾಪಕ ಕಲಾನಿಧಿ ಮಾರನ್ ಸಾವಿನ ಬೆದರಿಕೆ ಮಾಡುತ್ತಿರುವುದಾಗಿ ಪೋಲಿಸ್ ನಲ್ಲಿ ದೂರು ಸಲ್ಲಿಸಿದ್ದಾರೆ.
ಸನ್ ಟೀವಿ ಮತ್ತು ಸನ್ ಪಿಕ್ಚರ್ ನಿರ್ವಾಹಕ ನಿರ್ಧೇಶಕ ಮತ್ತು ಕಲಾನಿಧಿ ಮಾರನ್ ಪಾಲುದಾರ ಸಿ.ಓ.ಓ ಹಂಸರಾಜ್ ಸಕ್ಸೇನ ಚಲನಚಿತ್ರ ವಿತರಣಾಕಾರರು ಮತ್ತು ನಿರ್ಧೇಶಕರು ಸುಲ್ಲಿಸಿದ್ದ ವಂಚನೆಯ ಆರೋಪಕ್ಕೆ ಬಂದಿಸಲಾಗಿದ್ದು. ಜಾಮೀನಿ ಮೇಲೆ ಹೊರಗೆ ಬಂದಮೇಲೆ ಚೆನ್ನೈ ಪೊಲೀಸರಿಗೆ ಸಲ್ಲಿಸಿದ್ದ ದೂರಿನಲ್ಲಿ ಕಲಾನಿಧಿ ಮಾರನ್ ನಮಗೆ ನಿರಂತರವಾಗಿ ಗುಂಡಾಗಳಿಂದ ಬೆದರಿಸುತ್ತಿದ್ದಾರೆಂದು ಹೇಳಿದ್ದಾರೆ. ಪತ್ರಕಾರರೊಂದಿಗೆ ಮಾತನಾಡುತ್ತಿದ್ದ ಸಕ್ಸೇನ ತಾನು ಜೈಲಿನಲ್ಲಿದ್ದಾಗ ಕಲಾನಿಧಿ ಮಾರನ್ ನ ಕಾರ್ಯನಿರ್ವಾಹಕರು ನನ್ನ ಪತ್ನಿಯನ್ನು ಹೆದರಿಸಿ 12 ಕೋಟಿ ರುಪಾಯಿಗಳನ್ನು ಸುಲಿದಿದ್ದಾರೆ. ನಿತ್ಯನಂದರ CD ವಿಷಯದಲ್ಲೂ ಸನ್ ಟೀವಿ ವಂಚಂನೆಯಿಂದ ದುಡ್ಡು ಮಾಡಲು ಶಾಮಿಲಾಗಿತ್ತು ಮತ್ತು ಸನ್ ಟೀವಿ ಇಂತಹ ವಂಚನೆಯ ತಂತ್ರವನ್ನು ಕೈಗಾರಿಕೋದ್ಯಮಿಗಳಿಂದ ಲಕ್ಷಾಂತರ ರೂಪಾಯಿಗಳ ಸುಲಿಗೆಮಾಡಲು ಬಳಸುತ್ತದೆ.
ಸಕ್ಸೇನ: ಬೆದರಿಸಿ 12 ಕೋಟಿ ರುಪಾಯಿಗಳನ್ನು ತಗೆದುಕೊಂಡು ಹೋಗಿದ್ದಾರೆ. ನನ್ನ ಬಳಿ ಇದರ ವೀಡಿಯೊ ಮತ್ತು ಆಡಿಯೋ ಪುರಾವೆ ಇದೆ. ನನಗೆ ಸಾವಿನ ಬೆದರಿಕೆ ಮಾಡಿದ್ದಾರೆ. ಚಿತ್ತೊರೆ ನಿನಂದ ಜನರನ್ನು ತಂದು ನನ್ನನು 3 ದಿನಗಳಲ್ಲಿ ಮುಗಿಸುವುದಾಗಿ ಹೇಳಿದ್ದಾರೆ. ನಿತ್ಯನಂದರ CD ವಿಷಯದಲ್ಲೂ ಸನ್ ಟೀವಿ ವಂಚಂನೆಯಿಂದ ದುಡ್ಡು ಮಾಡಲು ಶಾಮಿಲಾಗಿತ್ತು. ಸಮಾಚಾರ ವಿಭಾಗದಲ್ಲಿ ದುಡ್ಡಿಗೋಸ್ಕರ ಏನನ್ನಾದರೂ ಪ್ರಸಾರಮಾಡುತ್ತಾರೆ. ಸರ್, ನ್ಯೂಸ್ ಎಡಿಟರ್ ರಾಜ ಮತ್ತು ಅವನ ತಂಡ ತಮಿಳು ನಾಡಿನ ಹಲವಾರು ಫ್ಯಾಕ್ಟೊರಿಗಳಿಗೆ ಹೋಗಿ ಚಿತ್ರೀಕರಣ ಮಾಡಿ ಅದರೊಂದಿಗೆ ವಯಸ್ಸಾದ ಹೆಂಗಸರು ಕೆಮ್ಮುವುದನ್ನು ಸೇರಿಸಿ, ಫ್ಯಾಕ್ಟರಿಯ ಕಳುಷಿತ ನೀರು ಕುಡಿಯುವ ನೀರಿಗೆ ಸೇರುತ್ತಿದೆ ಎಂದು ತೋರಿಸಿ, ಫ್ಯಾಕ್ಟರಿ ಮಾಲಿಕರಿಂದ ಲೂಟಿಮಾಡುತ್ತಾರೆ.
ಅಯ್ಯಪ್ಪನ್ ಮಾಡಿರುವ ವಂಚನೆಯ ದೂರು ನಿಜವೆಂದು ಹೇಳಲು ಬಂದಿದ್ದೇನೆ; ನನ್ನ ದೂರು ತಯಾರಾಗುತ್ತಿದೆ ಇದರಿಂದ ತಮಿಳು ನಾಡಿನ ಹಲವಾರು ಜನರ ನಿಜ ಸ್ವರೂಪ ಹೊರಗೆಬರಲಿದೆ.
ಸುದ್ದಿಕಾರ: ಸಕ್ಸೆನರಂತೆ ಅವನ ಸ್ನೇಹಿತ ಅಯ್ಯಪ್ಪನ್, ಕಲಾನಿಧಿ ಮಾರನ್ ವಿರುದ್ದ, ವಂಚನೆಯ ದೂರು ಸಲ್ಲಿಸಿದ್ದಾರೆ. ಸನ್ ಪಿಕ್ಚರ್ 34 ಕೋಟಿ ರುಪಾಯಿ ವಂಚಿಸಿದೆ ಅದನ್ನು ಕೆಳಿದರೆ ಕಲಾನಿಧಿ ಮಾರನ್, ರ್ ಮ್ ರ್ ರಮೇಶ್ ಮತ್ತು ಸೇಮ್ಬಿಯನ್ ಕಣ್ಣನ್ ನಮ್ಮ ಮತ್ತು ನಮ್ಮ ಕುಟುಂಬವನ್ನು ಬೆದರಿಸುತ್ತಿದ್ದಾರೆ.
ಅಯ್ಯಪ್ಪನ್ನ್: ಸನ್ ಟೀವಿ ನನಗೆ 400 ಕೋಟಿ ರುಪಾಯಿಗಳನ್ನು ಕೊಡಬೇಕಿದೆ, ನನ್ನ ಬಳಿ ಪುರಾವೆ ಇದೆ, ನನಗೆ, ನನ್ನ ಕುಟುಂಬಕ್ಕೆ ಅಥವಾ ನನ್ನ ಆಸ್ತಿಗಳಿಗೆ ಏನಾದರೂ ಆದರೆ ಕಲಾನಿಧಿ ಮಾರನ್, ರ್ ಮ್ ರ್ ರಮೇಶ್ ಮತ್ತು ಸೇಮ್ಬಿಯನ್ ಕಣ್ಣನ್ ಉತ್ತರ ಕೊಡಬೇಕಾಗುತ್ತದೆ.
ಸುದ್ಧಿಕಾರ: ಕಲಾನಿಧಿ ಮಾರನ್ ವಿರುದ್ದ ಸಲ್ಲಿಸಲಾಗಿರುವ ದೂರಿನಿಂದ ಪರಿಸ್ಥಿತಿಯೊಂದು ಸೃಷ್ಟಿಯಾಗಿದೆ.
ನಿಮಗೆ ತಮಿಳು ಓದಲು ಬರುವುದಾದರೆ, ಸಕ್ಸೇನ ತಪ್ಪೊಪ್ಪಿಗೆಯ ನಂತರ ನಡೆದ ತನಿಖೆಯ ಪತ್ರಿಕಾ ವರದಿ ಇಲ್ಲಿದೆ, ಇದರ ಕನ್ನಡದ ಅನುವಾದ:
ಸನ್ ಗ್ರೂಪ್ ಸಿ.ಇ.ಓ ಕಲಾನಿಧಿ ಮಾರನ್ 28 ಕೋಟಿ ರೂಪಾಯಿಗಳ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ವಿತರಣಕಾರ ಅಯ್ಯಪ್ಪನ್ ಪೋಲೀಸರ ಬಳಿ ದೂರುನೀಡಿದ್ದಾರೆ
ಚಿತ್ರ: ಅಯ್ಯಪ್ಪನ್ ಮತ್ತು ಸಕ್ಸೇನ, ಸಕ್ಸೇನ ಅಯ್ಯಪ್ಪನ್ ಜೊತೆಯಲ್ಲಿ ಸನ್ ಟೀವಿ ಕಲಾನಿಧಿ ಮಾರನ್ ವಿರುದ್ಧ ದೂರುಕೊಡಲು ಚೆನ್ನೈ ಪೋಲಿಸ್ ಆಯುಕ್ತರ ಕಚೇರಿಗೆ ಬಂದಿದ್ದರು.
ಚೆನ್ನೈ ಡಿಸೆಂಬರ್ 18: ಅಯ್ಯಪ್ಪನ್, ಸನ್ ಟೀವಿ ಮಾಜಿ ನೌಕರ ಚೆನ್ನೈ ಪೋಲಿಸ್ ಆಯುಕ್ತರ ಕಚೇರಿಗೆ ಬಂದು, ಸನ್ ಟೀವಿ ಸಿ.ಇ.ಓ ಕಲಾನಿಧಿ ಮಾರನ್, ವ್ಯವಸ್ಥಾಪಕ ರಮೇಶ್ , ಸೇಮ್ಬಿಯನ್ ಮತ್ತು ಕಣ್ಣನ್ ವಿರುದ್ಧ ದೂರುಸಲ್ಲಿಸಿ, ದೂರಿನಲ್ಲಿ ನನಗೆ ಕೊಡಬೇಕಿದ್ದ 28 ಕೋಟಿ ರೂಪಾಯಿಗಳನ್ನು ಕೇಳಿದ್ದಕ್ಕೆ ನನಗೆ ಜೀವದ ಬೆದರಿಕೆ ಹಾಕಿದ್ದಾರೆಂದು ಹೇಳಿದರು.
ಅಯ್ಯಪ್ಪನ್ ಸನ್ ಗ್ರೂಪ್ ನಲ್ಲಿ ವಿತರಣಕಾರರಾಗಿ ಕೆಲಸ ಮಾಡುತ್ತಿದ್ದೂ ನಿನ್ನೆ ಪೋಲಿಸ ರಲ್ಲಿ ದೂರುಸಲ್ಲಿಸಿದರು. ಇದರ ಹೆಚ್ಹಿನ ಮಾಹಿತಿ ಇಲ್ಲಿದೆ:
ಕಳೆದ 20 ವರ್ಷಗಳು ನಾನು ಚಲನಚಿತ್ರ ನಿರ್ಮಾಪಕ ಮತ್ತು ವಿತರಣಕಾರನಾಗಿದ್ದು, ಕಳೆದ 5 ವರ್ಷಗಳಿಂದ ಸನ್ ಪಿಕ್ಚರ್ಸ್ ತಯಾರಿಸಿದ ಚಿತ್ರಗಳನ್ನು ವಿತರಣೆ ಮಾಡಿದ್ದು ಅದಕ್ಕೆ 2% ಕೋಡುವುದಾಗಿ ಹೇಳಿದ್ದರು.
ನಾನು 17 ಚಿತ್ರಗಳ ವಿತರಣಾ ಹಕ್ಕುಗಳನ್ನು ಇತರರಿಗೆ ನೀಡಿದ್ದು, ಇದರಿಂದ 400 ಕೋಟಿ ರುಪಾಯಿಯನ್ನು ಸನ್ ಟೀವಿ ಗೆ ನೀಡಿದ್ದೇನೆ. ನನ್ನ 2% ಕಮಿಷನ್ ನನಗೆ ಇನ್ನು ಕೊಟ್ಟಿಲ್ಲ.
ವಿತರಕರಿಗೆ ಸನ್ ಪಿಚ್ಚರ್ಸ್ ವಿತರಣ ಹಕ್ಕುಗಳನ್ನು ನೀಡಿದ ಮೇಲೆ, ‘ಔಟ್ ಲ್ಯಾಂಡರ್, ಸುರಾ, ತೀರ್ಥ ವಿಲಯಾತು ಪಿಳ್ಳೈ, ತಿಲ್ಲಲಂಗಡಿ, ನಿನೈಥಾಳೆ ಇನಿಕ್ಕುಂ, ಯೆಕೆಅಯುಂ ಕಾದ್ಹಲ್, ಮಸಿಲಾಮಣಿ, ಮಾಪಿಲ್ಲೈ, ಎಂದ್ರಿರನ್’ ಚಿತ್ರಗಳು ನೆಲ ಕಚ್ಚಿದವು.
ಸನ್ ಪಿಚ್ಚರ್ಸ್ ಸಂಸ್ಥೆ ಚಿತ್ರಗಳ ಸೋಲಿನ ಪರಿಹಾರವನ್ನು ನನ್ನ ಮೂಲಕ ಎಲ್ಲಾ 17 ವಿತರಕರಿಗೆ ನೀಡುವುದಾಗಿ ಭರವಸೆ ನೀಡಿತ್ತು. ಇದು ಸುಮಾರು 24 ಕೋಟಿ ರುಪಾಯಿ ಇದನ್ನೂ ಸಹ ಕೊಡಲು ನಿರಾಕರಿಸುತ್ತಿದ್ದಾರೆ. ಈಗ ವಿತರಕರು ನನ್ನನ್ನು ಹಣ ಕೊಡೆಂದು ಕೇಳುತ್ತಿದ್ದಾರೆ.
ಸನ್ ಪಿಚ್ಚರ್ಸ್ ವಂಚನೆಯಿಂದಾಗಿ ನಾನು ನನ್ನ ಮನೆಯನ್ನು 4.36 ಕೋಟಿಗೆ ಮಾರಿ ವಿತರಕರಿಗೆ ಹಣನೀಡಿದ್ದೇನೆ, ಅದಲ್ಲದೆ ಸನ್ ಪಿಚ್ಚರ್ಸ್ ತಯಾರಿಸಿದೆ ಚಲನ ಚಿತ್ರಗಳ ಮುದ್ರಣ, ಪೋಸ್ಟರ್ ಮತ್ತು ವೈನಲ್ ಗಳನ್ನು ತಯಾರಿಸಲು 4.26 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ, ಇದೂ ಸೇರಿದರೆ ಸನ್ ಸಂಸ್ಥೆ ನನಗೆ 28.26 ಕೋಟಿ ರೂಪಾಯಿಗಳನ್ನು ಕೊಡಬೇಕಿದೆ, ಇದನ್ನು ಕೇಳಿದರೆ ಜೀವದ ಬೆದರಿಕೆ ಹಾಕುತ್ತಿದ್ದಾರೆ.
ರಕ್ಷಣೆಯ ಅಗತ್ಯ
ಇದಕ್ಕೆ ಕಾರಣ ಕರ್ತರು ಸನ್ ಗ್ರೂಪ್ ಸಿ.ಇ.ಓ ಕಲಾನಿಧಿ ಮಾರನ್, ಮ್ಯನೆಜೆರ್ ರಮೇಶ್, ಸೇಮಿಬ್ಯಾನ್ ಮತ್ತು ಕಣ್ಣನ್. ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಬರಬೇಕಾದ ಹಣ ಕೊಡಿಸಬೇಕು. ಇವರಿಂದ ನನ್ನ ಮತ್ತು ನನ್ನ ಕುಟುಂಬವನ್ನು ರಕ್ಷಿಸಬೇಕು ಎಂದು ಅಯ್ಯಪ್ಪನ್ ದೂರಿನಲ್ಲಿ ಕೇಳಿಕೊಂಡಿದ್ದಾರೆ.
ಈ ದೂರನ್ನು ಕೇಂದ್ರ ಕ್ರೈಮ್ ಬ್ರಾಂಚ್ ಪೋಲಿಸ್ ಬಳಿ ತನಿಖೆಗೆ ಕಳುಹಿಸಲಾಗಿದೆ.
‘ಸನ್ ಟೀವಿ ಕಲಾನಿಧಿಯ ಮುಖವನ್ನು ಹರಿದು ಹಾಕುತ್ತೇನೆ’ ಸಕ್ಸೇನ ಉದ್ರೇಕದ ಸಂದರ್ಶನ
ಚೆನ್ನೈ ಡಿಸೆಂಬರ್ 18 – ಸನ್ ಟೀವಿಯ ಮಾಜಿ ಅಧಿಕಾರಿ ಸನ್ ಟೀವಿಯ ಕಲಾನಿಧಿಯ ಮುಖವನ್ನು ಹರಿದು ಹಾಕುವುದಾಗಿ ಮತ್ತು ಕೆಲವೇ ದಿನಗಳಲ್ಲಿ ಸತ್ಯವನ್ನು ಬೆಳಕಿಗೆ ತರುವುದಾಗಿ ಹೇಳಿದ್ದಾರೆ.
ಮಾಜಿ ಅಧಿಕಾರಿ ಸಕ್ಸೇನ, ಅಯ್ಯಪ್ಪನ್ ಜೊತೆಯಲ್ಲಿ ಚೆನ್ನೈ ಪೋಲಿಸ್ ಕಮಿಷನರ್ ನೋಡಲು ಬಂದಿದ್ದು ಹೊರಗೆ ಬಂದಾಗ ನೀಡಿದ ಸಂದರ್ಶನದಲ್ಲಿ ಹೀಗೆಂದರು.
ನಾನು ಸನ್ ಟೀವಿಯಲ್ಲಿ ಕರ್ಯಕಾರಿಯಾಗಿದ್ದಾಗ ಕಲಾನಿಧಿ ಮಾರನ್ ಕೆಳಗೆ ಕೆಲಸಮಾಡುತಿದ್ದೆ, ಕಲಾನಿಧಿ ಯಾವಾಗಲು ಹೊರಗೆ ತನ್ನ ಮುಖವನ್ನು ತೋರಿಸುತ್ತಿರಲಿಲ್ಲ ಹಾಗಾಗಿ ನಾನೇ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೂ ಚಲನಚಿತ್ರ ಪ್ರಪಂಚದಲ್ಲಿ ಬಹಳ ಪರಿಚಿತನಾಗಿದ್ದೆ.
ಅವನನ್ನು ಸ್ನೇಹಿತನೆಂದು ಭಾವಿಸಿದ್ದೆ.
ಕಲಾನಿಧಿಗೆ ಹಗಲುರಾತ್ರಿ ಎನ್ನದೆ ದುಡಿದಿದ್ದೇನೆ. ನಾವಿಬ್ಬರೂ ಒಟ್ಟಿಗೆ ಓದಿದ್ದು, ಇವನನ್ನು ನಾನು ಬಳಷ್ಟು ದಿನಗಳು ಊಟವಿಲ್ಲದೆ ಕೆಲಸ ಮಾಡಿ ಇಂದು ಇವನು 50 ಸಾವಿರ ಕೋಟಿಯ ಸಂಪತ್ತಿನ ಒಡೆಯನಾಗಿ ಮಾಡಿದ್ದೇನೆ.
1೦ ನಿಮಿಷಗಳಲ್ಲಿ ತೀರ್ಮಾನವಾಗುವ ಈ ವಿಷಯವನ್ನು ದೊಡ್ಡದು ಮಾಡಿ ನನ್ನನು 79 ದಿನಗಳ ಜೈಲುವಾಸಕ್ಕೆ ಕಳುಹಿಸಿದ ಮತ್ತು ಇದನ್ನು ಮನರಂಜನೆಯಂತೆ ನೋಡುತ್ತಿದಾನೆ. ಇದರಲ್ಲಿ ಮ್ಯನೆಜೆರ್ ರಮೇಶ್, ಸೇಮಿಯನ್ ಮತ್ತು ಕಣ್ಣನ್ ಇವನಿಗೆ ಕುಮ್ಮಕ್ಕಾಗಿದ್ದಾರೆ.
ಇವರು ಮಾಡುವ ಎಲ್ಲಾ ದೌರ್ಜನ್ಯಗಳನ್ನು ನಾನು ತಿಳಿದಿದ್ದೇನೆ. ಇದಕ್ಕೆಲಾ ಸಾಕ್ಷಿಗಳಿವೆ. ನನ್ನ ಜೀವವನ್ನೇ ತ್ಯೆದು ದುಡಿದಿದ್ದಕ್ಕೆ ನನ್ನ ಮೇಲೆ ವಂಚನೆಯ ಆಪಾದನೆಗಳನ್ನು ಮಾಡುತ್ತಿದ್ದಾರೆ, ವಂಚಕರು ಯಾರೆಂದು ನನಗೆ ಗೊತ್ತು.
ಯಾರು ತಪ್ಪು ಮಾಡಿದ್ದಾರೆಂದು ಪೋಲೀಸರ ಮತ್ತು ಮಾಧ್ಯಮಗಳ ಮುಂದೆ ವಾಗ್ವಾದಕ್ಕೆ ನಾನು ತಯಾರು, ಎಷ್ಟುದಿನ ನನ್ನನ್ನು ಹೆದರಿಸಲು ಸಾಧ್ಯ, ಇವನಿಗೆ ಇಂದು ರಾಜಕಾರಣಿಗಳ, ಹಣದ ಹಾಗೂ ಜನರ ಬೆಂಬಲವಿದೆ ಆದರೆ ನಿಜವನ್ನು ಎಷ್ಟುದಿನ ಮುಚ್ಚಿಡಲು ಸಾಧ್ಯ?
ಇದೇ ನಿನ್ನ ಕೃತಜ್ಞತೆ?, ನಿನ್ನ ಚಿತ್ರ ‘ಎಂದಿರನ್’ 200 ಕೋಟಿ ರುಪಾಯಿಗಳಿಸಿತು, ನಾನು ಇದನ್ನು 400 ಕೋಟಿಗಳಿಗೆ ಮಾರಿಸಿದ್ದೆ? ಕಲಾನಿಥಿ ಹೇಳುವಂತೆ ಸನ್ ಟೀವಿ ಯಲ್ಲಿ ಧೂಳು ಸರಿದರು ಇವನಿಗೆ ತಿಳಿಯುತ್ತದೆ, ಹಾಗಿದ್ದರೆ ರಮೇಶ್, ಸೇಮ್ಬಿಯನ್ ಮತ್ತು ಕಣ್ಣನ್ ಮಾಡುತ್ತಿರುವ ವಂಚನೆ ಇವನಿಗೆ ತಿಳಿಯದೆ? ಸನ್ ಟೀವಿ ಯಲ್ಲಿ ನಡೆದ ಎಲ್ಲಾ ಆಗು ಹೋಗುಗಳು ನನಗೆ ತಿಳಿದಿದೆ ಎಲ್ಲವನ್ನು ಬೆಳಕಿಗೆ ತರುತ್ತೇನೆ.
ನಮ್ಮನ್ನು ಮುಗಿಸಲು ಗುಂಡಾಗಳನ್ನು ಕಳುಹಿಸಿ, ‘ಮೂರು ದಿನಗಳಲ್ಲಿ ಮುಗಿಸುವುದಾಗಿ’, ಹೇಳಿದ್ದಾರೆ ನಾನು ಏನಾದರು ತಪ್ಪು ಮಾಡಿದ್ದರೆ ಅದಕ್ಕೆ ಎಂತಹ ಶಿಕ್ಷೆಯಾದರು ಅನುಭವಿಸುತ್ತೇನೆ ಆದರೆ ನೀನು ಮಾಡಿದ ಅಪಕೃತ್ಯಗಳಿಗೆ ಶಿಕ್ಷೆ ಯಾವಾಗ?
ಅಯ್ಯಪ್ಪನ್ ಹಣವನ್ನು ನನ್ನ ಮೂಲಕವೇ ಕೊಟ್ಟಿದ್ದು, ನಾವು ನೀನು ಕೊಟ್ಟ ಹಣದಲ್ಲಿ ಎಷ್ಟು 100 ಮತ್ತು 1000 ರುಪಾಯಿಯ ನೋಟುಗಳಿವೆ ಎಂದು ನೋಡಬಾರದೇ?
‘ನಿತ್ಯಾನಂದ-ರಂಜಿತಾ cd ವಿಶದಲ್ಲಿ ನನ್ನನ್ನು ಸಿಕ್ಕಿಸಿ ನೀನು ಖುಷಿಪಟ್ಟೆ, ನೀನು ಮಾಡಿದ ಅಪಕೃತ್ಯಗಳಿಗೆ ನಾನು ಶಿಕ್ಷೆ ಅನುಭವಿಸುವುದೇ? ನನ್ನು ಮತ್ತು ನನ್ನ ಕುಟುಂಬವನ್ನು ಜೀವಂತ ಸುಟ್ಟುಬಿಡುವುದಾಗಿ ಹೇಳುತ್ತಿದಿಯಾ? ನಾನು ಇನ್ನ ಮುಖವನ್ನು ಹರಿದು ಚಿಂದಿ ಮಾಡುತ್ತೇನೆ.’ ಎಂದು ಉದ್ರೆಕದಿಂದ ನುಡಿದರು.
ನಿತ್ಯಾನಂದ-ರಂಜಿತ CD ವಿಷಯದಲ್ಲಿ ಏನು ನಡೆಯಿತೆಂದು ಸಕ್ಸೇನ ಸಂದರ್ಶನ :
ನಾನು ರಜೆಗೆ ದುಬೈಗೆ ಹೋಗಿದ್ದಾಗ ನನ್ನ ಹೆಸರಿಗೆ ಒಂದು CD ಬಂದಿತ್ತು. ನನ್ನ ಸಹಾಯಕ ಜ್ಯೋತೀಸ್ವಾರನ್ CD ಯನ್ನು ವಿಕ್ಷಿಸಿದ್ದ. ಅವನಿಗೆ CD ಯಲ್ಲಿದ್ದ ಜನರು ಯಾರೆಂದು ಗೊತ್ತಿರಲಿಲ್ಲ, ಅವನು CD ಯನ್ನು ಮ್ಯಾನೇಜರ್ ಕಣ್ಣನ್ ಗೆ ತೋರಿಸಿದ, ಅವನಿಗೆ CD ಯಲ್ಲಿ ರಂಜಿತ ಇರುವುದು ಗೊತ್ತಿತ್ತು ಆದರೆ ಅದರಲ್ಲಿರುವ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ. ಕಣ್ಣನ್ ನನಗೆ ಫೋನ್ ಮಾಡಿ ಹೀಗೆ ಒಂದು CD ಬಂದಿರುವುದಾಗಿ ತಿಳಿಸಿದ್ದ, ನಾನು ಅದಕ್ಕೆ ಗಮನ ಕೊಡಲಿಲ್ಲ.
ಈ CD ಸನ್ ಟೀವಿ ಸಂಪಾದಕ ರಾಜನನ್ನು ತಲುಪಿತು. ಅವನು ಕಲಾನಿಧಿ ಗೆ ತೋರಿಸಿ ಇದರಲ್ಲಿರುವುದು ನಿತ್ಯಾನಂದ ಮತ್ತು ರಂಜಿತಾ ಇದನ್ನು ಟೀವಿ ಯಲ್ಲಿ ಪ್ರಸಾರಮಾಡಿ ಇವರನ್ನು ಛಿದ್ರ ಗೊಳಿಸಬಹುದು ಎಂದ.
ಕಲಾನಿಧಿ ಇದು ನಿಜವೆಂದು ಖಾತರಿಮಾಡಿಕೊಂಡು ನಂತರ ಪ್ರಸಾರ ಮಾಡುವಂತೆ ಹೇಳಿದ. ರಾಜ ಇದನ್ನು ‘ಯೆಂಥಿರನ್’ ಚಿತ್ರದ ಗ್ರಾಫಿಕ್ಸ್ ನಿರ್ವಹಿಸಿದ್ದ ಶ್ರೀನಿವಾಸನ್ ಗೆ ತೋರಿಸಿ ಇದು ಅಸಲಿ ಎಂದು ಬರವಣಿಗೆಯಲ್ಲಿ ಕೊಡುವಂತೆ ಹೇಳಿದ. ಶ್ರೀನಿವಾಸನ್ ಇದನ್ನು ನಿರಾಕರಿಸಿದ.
ನನ್ನ ಜೀವನದಲ್ಲಿ ನಾನು ನಿಥ್ಯಾನಂದನನ್ನು ಎಂದೂ ನೋಡಿಲ್ಲ ಆದರೆ ಈ ವಿಷಯದಲ್ಲಿ ಹೀಗೆ ನನ್ನನು ಸಿಕ್ಕಿಹಾಕಿಸಿದರು.
ಸನ್ ಟೀವಿ ರಾಜನ ಬಳಿ ಕೋಟಿಗಟ್ಟಲೆ ಆಸ್ತಿ ಹೇಗೆ ಬಂದಿತೆಂದು ನನಗೆ ಗೊತ್ತು, ರಾಜನ ಹಣ ಮಾಡುವ ವೈಖರಿಯೇ ಒಂದು ವಿಶಿಷ್ಟವಾದುದು. ಮೋರಿಯ ನೀರು ಹರಿಯುವುದನ್ನು ತೋರಿಸಿ ರೂಗ ಹರಡುತ್ತಿದೆ ಎಂದು ಹೇಳಿ ಫ್ಯಾಕ್ಟರಿ ಮಾಲಿಕರಿಂದ ಲಕ್ಷಗಟ್ಟಲೆ ಹಣ ಸುಲಿಯುತ್ತಾನೆ. ಸನ್ ಟೀವಿ ಯ ವಿಷಯದಲ್ಲಿ ಹೀಗೆ ಹಲವಾರು ವಿಷಯಗಳಿವೆ ನಾನು ಈ ವಿಷಯಗಳನ್ನು ಹೇಳುತ್ತಾ ಹೋಗುತ್ತೇನೆಂದು ಸಕ್ಸೇನ ಹೇಳಿದರು.
–ಮುಕ್ತಾಯ–
–ನೆನಪಿರಲಿ ಸಕ್ಸೇನ CDಯ ಬಗ್ಗೆ ಹೇಳಿದ್ದು ನಿಜವೆಂದು ಈಗಾಗಲೇ ನಮಗೆ ತಿಳಿದಿದೆ, 4 ಗೌರವಾನ್ವಿತ ನಿಪುಣ ತಜ್ಞರ ವಿಸ್ತಾರವಾದ ವಿಶ್ಲೇಷಣೆಯಿಂದ ಇದು ಸಾಬಿತುಪಡಿಸಿದೆ. ತಜ್ಞರ ವರದಿ ಇಲ್ಲಿದೆ.