ಚೆನ್ನೈ: ಮಾರ್ಚ್ 14 2012 ರಂದು ತಮಿಳು ನಾಡಿನ CBCID ಲೆನಿನ್ ಕರುಪ್ಪನ್ ನನ್ನು ಸುಲಿಗೆ, ಬ್ಲಾಕ್ ಮೇಲ್ ಮತ್ತು ದುರುದ್ದೇಶದ ಪಿತುರಿ ಆರೋಪಗಳಿಗೆ ವಿಚಾರಣೆಗೆಂದು ಬಂದಿಸಲಾಯಿತು, ಇವನನ್ನು ತಮಿಳ್ನಾಡಿನ CID ಪ್ರೆಶ್ನಿಸುತ್ತಿದ್ದು ಅವನು ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ.
ಈ ಮುಂಚೆ ಮಾರ್ಚ್ 2010 ರಲ್ಲಿ ನಿತ್ಯಾನಂದ ಧ್ಯಾನಪೀಟಂ ಆಡಳಿತಾಧಿಕಾರಿ ಸಲ್ಲಿಸಿದ್ದ ದೂರಿನಲ್ಲಿ ಲೆನಿನ್ ಕರುಪ್ಪನ್ ಪಿತೂರಿ ಹೂಡಿದ ಹಾಗೂ ಬ್ಲಾಕ್ ಮೈಲ್ ಮಾಡಿದ್ದ ಆರೋಪಕ್ಕಾಗಿ ಪ್ರಧಾನ ಸೆಶನ್ ನ್ಯಾಯಧಿಶರು ಜಾಮೀನು ನಿರಾಕರಿಸಿದ್ದರು.
ಲೆನಿನ್ ಮೇಲಿನ ಅಪಾದನೆಗಳು ಗಂಭೀರವಾಗಿರುವುದರಿಂದ ಇವನಿಗೆ ಗೌರವಾನ್ವಿತ 11ನೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ತಮಿಳು ನಾಡಿನ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲವೂ ಇವನ ಜಾಮೀನಿನ ಮನವಿಗಳನ್ನು ತಿರಸ್ಕರಿಸಿದ್ದವು.
ಮಿಸ್ ರಂಜಿತಾ ಕೂಡ ಈ ಅಪರಾಧಗಳಿಗೆ ಬಲಿಯಾಗಿದ್ದು ಅವರಿಂದ ಬೆದರಿಕೆ ಮತ್ತು ದುರುದ್ದೇಶದ ಪಿತೂರಿಯಂತಹ ಗಂಭೀರ ಆರೋಪಗಳನ್ನು ಲೆನಿನ್ ಎದುರಿಸುತ್ತಿದ್ದಾನೆ. ಇವನ ದಸ್ತಗಿರಿಗೆ ಈ ಮೊದಲು ರಾಮನಗರ ನ್ಯಾಯಾಲಯದ ಗೌರವಾನ್ವಿತ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.